ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಇಂದು ಅರಮನೆ ಮೈದಾನ (Palace Ground) ದಲ್ಲಿ ನಡೆಯುತ್ತಿರೋ 25ನೇ ಟೆಕ್ ಸಮ್ಮಿಟ್ (Bengaluru Tech Summit 2022) ಗೆ ವರ್ಚುಯಲ್ ಮೂಲಕ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದರು.
Advertisement
ಎಲ್ಲರಿಗೂ ನಮಸ್ಕಾರ. ಕರ್ನಾಟಕಕ್ಕೆ ಸ್ವಾಗತ. ನಮ್ಮ ಬೆಂಗಳೂರಿಗೆ ಸ್ವಾಗತ ಎಂದು ಕನ್ನಡದಲ್ಲಿಯೇ ಮಾತು ಶುರು ಮಾಡಿದ ಮೋದಿ, ಬೆಂಗಳೂರು ಟೆಕ್ನಾಲಜಿಯ ತವರೂರು. ಬೆಂಗಳೂರು ಗ್ಲೋಬಲ್ ಇಂಡೆಕ್ಸ್ (Bengaluru Global Index) ನಲ್ಲಿ ನಂಬರ್ ಒನ್ ಇದೆ. ಭಾರತದ ಇನ್ನೋವೇಶನ್ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ. ಭಾರತದಲ್ಲಿ ಇನ್ನೋವೇಟಿವ್ ಯುವ ಸಮೂಹ ಇದೆ. ನಮ್ಮ ದೇಶದ ಯುವ ಸಮೂಹದ ಶಕ್ತಿ ಇಡೀ ವಿಶ್ವಕ್ಕೆ ಈಗಾಗಲೇ ಪರಿಚಿತವಾಗಿದೆ ಎಂದರು.
Advertisement
#WATCH | "Your investments & our innovation can do wonders. Your trust & our tech talent can make things happen. I invite you all to work with us as we lead the world in solving its problems," PM Modi at Bengaluru Tech Summit pic.twitter.com/MzpX0UDdBs
— ANI (@ANI) November 16, 2022
Advertisement
ನಾವೀಗ 3ನೇ ಅತಿ ದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದ್ದೇವೆ. ಆರ್&ಡಿ ವಿಚಾರವಾಗಿಯೂ ನಾವು ತುಂಬಾ ಮುಂದೆ ಬಂದಿದ್ದೇವೆ. ಭಾರತೀಯ ಯುವ ಪೀಳಿಗೆಗೆ ಮೊಬೈಲ್ ಹಾಗೂ ಡೇಟಾ ಉಪಯೋಗದಿಂದ ಹಲವಾರು ಆವಿಷ್ಕಾರ ಮಾಡಿದ್ದಾರೆ. ಬ್ರಾಡ್ ಬ್ಯಾಂಡ್ ಸಂಪರ್ಕ 60 Million ನಿಂದ 810 Million ಆಗಿದೆ. ಸ್ಮಾರ್ಟ್ ಪೋನ್ ಬಳಿಕೆ 130 Million ನಿಂದ 750 Million ಆಗಿದೆ. ಇಂಟರ್ ನೆಟ್ ಉಪಯೋಗಿಸೋ ಜನರು ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಇದ್ದಾರೆ ಎಂದು ಹೇಳಿದರು.
Advertisement
ಭಾರತ ಕೊರೊನಾವನ್ನ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಕೊರೊನಾ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸ ಮಾಡಿದೆ. ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ ಆಯುಷ್ಮಾನ್ ಭಾರತ್ (Ayushman Bharat) ಯೋಜನೆ ಹೊಂದಿರೋ ದೇಶವಾಗಿದೆ. ಟೆಕ್ನಾಲಜಿ ಬಳಕೆಯಲ್ಲಿ ಭಾರತ ಮುಂದಿದೆ. ಆರೋಗ್ಯ, ಶೈಕ್ಷಣಿಕ ವಲಯದವರೆದೂ ಟೆಕ್ನಾಲಜಿ ಬಳಕೆ ಆಗ್ತಿದೆ. ನಮ್ಮ ಡೇಟಾ ದರಗಳು ಪ್ರಪಂಚದಲ್ಲಿ ಅತಿ ಕಡಿಮೆ ಬೆಲೆಯಾಗಿದೆ ಎಂದು ತಿಳಿಸಿದರು.
During the pandemic, low data costs helped poor students attend online classes. Else students would have been deprived of education for 2 whole years. India is using technology as a weapon against poverty: PM Modi via a pre-recorded message at Bengaluru Tech Summit pic.twitter.com/54j49U4ooV
— ANI (@ANI) November 16, 2022
ಕೋವಿಡ್ ಸಂದರ್ಭದಲ್ಲಿ ಡಾಟಾ, ಟೆಕ್ನಾಲಜಿ ಬಳಕೆಯಿಂದ ಮಕ್ಕಳಿಗೆ ವಿದ್ಯೆ ನೀಡುವ ಕೆಲಸ ಮಾಡಲಾಗಿದೆ. ಟೆಕ್ನಾಲಜಿ ಬಳಕೆಯಿಂದ ಭ್ರಷ್ಟಾಚಾರ ಕಡಿವಾಣಕ್ಕೆ ಸಹಾಯ ಆಗುತ್ತೆ. ಬೀದಿ ಬದಿ ವ್ಯಾಪಾರಗಳು ಡಿಜಿಟಲ್ ಪೇಮೆಂಟ್ ಬಳಸಲು ಉತ್ತೇಜನ ನೀಡಲಾಯ್ತು. ಡಿಜಿಟಲ್ ಪೇಮೆಂಟ್ ಬಳಸೋರಿಗೆ ಇನ್ಸಿಂಟಿವ್ ಗಳನ್ನು ನೀಡಲಾಯ್ತು. ಟೆಕ್ನಾಲಜಿ ಬಳಕೆಯಿಂದ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಿದೆ ಎಂದರು.
ಬೆಂಗಳೂರು ಟೆಕ್ ಸಮ್ಮಿಟ್ ಗೆ ದೀಪ ಬೆಳಗುವ ಮೂಲಕ ಸಿಎಂ ಬೊಮ್ಮಾಯಿ ಸಾಂಪ್ರದಾಯಿಕ ಚಾಲನೆ ನೀಡಿದರು. ಈ ಕಾರ್ಯಕ್ರಮವು ಇಂದಿನಿಂದ ನವೆಂಬರ್ 18ವರೆಗೆ 3 ದಿನಗಳ ಕಾಲ ನಡೆಯಲಿದೆ. ಸಚಿವರಾದ ಅಶ್ವಥ್ ನಾರಾಯಣ, ಮುರುಗೇಶ್ ನಿರಾಣಿ, ಕಿರಣ್ ಮಜುಂದಾರ್ ಶಾ, ಸಿಎಸ್ ವಂದಿತಾ ಶರ್ಮಾ, ನಾಲ್ಕು ದೇಶಗಳ ಸಚಿವರು ಮತ್ತು ಪ್ರತಿನಿಧಿಗಳು ಭಾಗಿಯಾಗಿದ್ದಾರೆ. 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 550 ಪ್ರದರ್ಶಕರು, 16 ರಾಜ್ಯಗಳ ಸ್ಟಾರ್ಟ್ ಅಪ್ ಗಳು ಪಾಲ್ಗೊಂಡಿದ್ದವು.