ಬೆಂಗಳೂರು: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ವರ್ತೂರು ಪೊಲೀಸ್ ಠಾಣೆಯ ನಾಗಭೂಷಣ್, ಶಿವರಾಜ್, ನಾಗರಾಜ್ ಅಮಾನತ್ತಾದ ಸಿಬ್ಬಂದಿ. ಮನೆಗಳ್ಳತನ ಪ್ರಕರಣವೊಂದರ ಸಂಬಂಧ ಸಲ್ಮಾನ್ ಎಂಬಾತನನ್ನು ವರ್ತೂರು ಪೊಲೀಸರು ಕರೆ ತಂದಿದ್ದರು. ಸುಳ್ಳು ಆರೋಪದ ಮೇರೆಗೆ ಸಲ್ಮಾನ್‌ನನ್ನು ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ಈ ಸಂಬಂಧ ಸಲ್ಮಾನ್ ಕುಟುಂಬದವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ
ಘಟನೆ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ದೇವರಾಜ್‌ಗೆ ಸಲ್ಮಾನ್ ಕುಟುಂಬಸ್ಥರು ದೂರು ನೀಡಿದ್ದರು. ಇಲಾಖಾ ತನಿಖೆ ವೇಳೆ ಕಾನೂನು ಪಾಲನೆ ಮಾಡದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ದೇವರಾಜ್ ಅವರು ವರ್ತೂರು ಠಾಣೆಯ ಮೂರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ