ಬೆಂಗಳೂರು: ಭಾರೀ ಗೊಂದಲಕ್ಕೆ ಕಾರಣವಾಗಿರೋ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಕೊನೆಗೂ ಸಚಿವ ಸುರೇಶ್ ಕುಮಾರ್ ಮೌನ ಮುರಿದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಮರು ಪರೀಕ್ಷೆಯೂ ಮಾಡುವುದಿಲ್ಲ. ಯಾವುದೇ ವಿದ್ಯಾರ್ಥಿಗಳು ಆತಂಕ ಆಗೋದು ಬೇಡ. ಪಬ್ಲಿಕ್ ಪರೀಕ್ಷೆಯೂ ನಿರಾತಂಕವಾಗಿ ನಡೆಯುತ್ತೆ ಎಂದು ಭರವಸೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕಿನಲ್ಲಿ ಸ್ಪಷ್ಟನೆ ನೀಡಿರುವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಭಯ ನೀಡಿದ್ದಾರೆ. ಪೂರ್ವ ಸಿದ್ಧತಾ ಪರೀಕ್ಷೆ ಮಕ್ಕಳಿಗೆ ಮುಖ್ಯ. ಪರೀಕ್ಷೆ ಪ್ರಶ್ನೆ ಪತ್ರಿಕೆ ವಿಧಾನ ತಿಳಿಸಿಕೊಡಲು ನಡೆಸುವ ಪರೀಕ್ಷೆ ಅಷ್ಟೇ. ರಾಜ್ಯದಲ್ಲಿ 15 ಸಾವಿರ ಪ್ರೌಢಶಾಲಾ ಇವೆ. ಇದರಲ್ಲಿ 2 ಸಾವಿರ ಪ್ರೌಢ ಶಾಲೆಗಳಲ್ಲಿ ಪ್ರಾಂಶುಪಾಲರ ಸಂಘವೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುತ್ತೆ. ಉಳಿದ ಶಾಲೆಗಳಿಗೆ ಎಸ್.ಎಸ್.ಎಲ್.ಸಿ ಬೋರ್ಡ್ ನಿಂದಲೇ ಪರೀಕ್ಷೆ ನಡೆಸಲಾಗುತ್ತೆ ಎಂದರು.
Advertisement
Advertisement
ಪ್ರಶ್ನೆ ಪತ್ರಿಕೆಯನ್ನು 3 ದಿನಗಳ ಮುಂಚೆಯೇ ಆಯಾ ಶಾಲೆಗಳಿಗೆ ತಲುಪಿಸಿದ್ದೇವೆ. ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತೆ. ಅದೇ ಶಾಲೆಯಲ್ಲಿಯೇ ಮೌಲ್ಯಮಾಪನ ನಡೆಯುತ್ತೆ. ಹೀಗಿರುವಾಗಿ ಇದನ್ನು ಸೋರಿಕೆ ಅಂತ ಕರೆಯೋದು ಸರಿಯಲ್ಲ. ಈ ವಿಚಾರವಾಗಿ ಶಿಕ್ಷಕರು ತಮ್ಮ ನೈತಿಕತೆಗೆ ಅನುಗುಣವಾಗಿ ಕೆಲಸ ಮಾಡೋದು ಮುಖ್ಯ ಅಂತ ತಿಳಿಸಿದ್ದಾರೆ. ಪೇಪರ್ ಲೀಕ್ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮವಹಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಮರು ಪೂರ್ವ ಸಿದ್ಧತಾ ಪರೀಕ್ಷೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಮಾರ್ಚ್-ಏಪ್ರಿಲ್ ನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವುದು ಬೇಡ. ಪಬ್ಲಿಕ್ ಪರೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭದ್ರತೆ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಯುತ್ತದೆ. ಮಕ್ಕಳು ಮತ್ತು ಪೋಷಕರು ಆತಂಕ ಆಗೋದು ಬೇಡ. ಎಸ್.ಎಸ್.ಎಲ್.ಸಿ ಬೋರ್ಡ್ ಮತ್ತು ಶಿಕ್ಷಣ ಇಲಾಖೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುತ್ತದೆ ಎಂದು ತಿಳಿಸಿದ್ದಾರೆ.