– ಮುನಿಯಪ್ಪ ಅಸ್ತ್ರ ಪ್ರಯೋಗ
ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕನೊಬ್ಬನ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಜೊತೆಯಾಗಿ ದಾಳ ಉರುಳಿಸಿದ್ದಾರೆ. ಆ ನಾಯಕನನ್ನು ದೆಹಲಿಗೆ ಕಳುಹಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಸ್ಪರ್ಧೆಯಿಂದ ದೂರ ಇಡುವ ತಂತ್ರಗಾರಿಕೆಯನ್ನ ಈಗಿನಿಂದಲೇ ಮಾಡ್ತಿದ್ದಾರೆ.
Advertisement
ಹೌದು, ಆ ನಾಯಕ ಬೇರೆ ಯಾರೂ ಅಲ್ಲ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್. ಪಂಜಾಬ್‍ನಲ್ಲಿ ದಲಿತ ನಾಯಕನಿಗೆ ಕಾಂಗ್ರೆಸ್ ಸಿಎಂ ಪಟ್ಟ ಕಟ್ಟಿದ ಬಳಿಕ ಕರ್ನಾಟಕದಲ್ಲೂ ಅದೇ ಕೂಗು ಕೇಳಿಬಂದಿತ್ತು. ಆ ಕೂಗನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ಪರಮೇಶ್ವರ್. ಆದರೆ ಪರಮೇಶ್ವರ್‍ರನ್ನೇ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದ್ರೆ ಹೇಗೆ ಎಂಬ ಲೆಕ್ಕಾಚಾರದಲ್ಲಿದ್ಯಂತೆ ಸಿದ್ದು-ಡಿಕೆ ಬಣ. ಇದನ್ನೂ ಓದಿ: ವೈರಿಗಳ ಕಾಟದಲ್ಲಿ ಬದ್ಕೋಕಾಗ್ತಿಲ್ಲ: ಹೆಚ್.ಡಿ.ರೇವಣ್ಣ
Advertisement
Advertisement
ಪರಮೇಶ್ವರ್ ವಿರುದ್ಧ ಮುನಿಯಪ್ಪ ಅಸ್ತ್ರ ಪ್ರಯೋಗದ ಲೆಕ್ಕಾಚಾರವೂ ಹೌದು. ಎಐಸಿಸಿ ಪುನರ್ ರಚನೆಗೆ ಹೈಕಮಾಂಡ್ ಸಿದ್ಧತೆ ಮಾಡಿಕೊಳ್ತಿದೆ. ರಾಜ್ಯದ ನಾಯಕರೊಬ್ಬರಿಗೆ ಎಐಸಿಸಿಯಲ್ಲಿ ಅವಕಾಶ ನೀಡಲು ಹೈಕಮಾಂಡ್ ಮುಂದಾಗಿದೆ. ಪರಮೇಶ್ವರ್ ಅವರನ್ನೇ ಎಐಸಿಸಿಗೆ ನೇಮಿಸಿಕೊಳ್ಳಿ ಅಂತ ಸಿದ್ದು-ಡಿಕೆಶಿ ಬಣ ಹೈಕಮಾಂಡ್ ಮುಂದೆ ಪ್ರಸ್ತಾಪ ಇಟ್ಟಿದೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
Advertisement
ಕರ್ನಾಟಕದಲ್ಲಿ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಅವರಿಗೆ ಕೆಪಿಸಿಸಿಯಲ್ಲಿ ಯಾವುದಾದರೂ ಪ್ರಮುಖ ಜವಾಬ್ದಾರಿ ಕೊಡಿ ಎಂದು ಇಬ್ಬರೂ ನಾಯಕರು ಹೈಕಮಾಂಡ್‍ಗೆ ಸಲಹೆ ಕೊಟ್ಟಿದ್ದಾರೆ.