ತಾಯಿಗೆ ನಾನು ಮೋಸ ಮಾಡಲಿಲ್ಲ, ತಾಯಿಯೇ ನನ್ನ ತಬ್ಬಲಿ ಮಾಡಿದಳು: ಶರತ್ ಬಚ್ಚೇಗೌಡ

Public TV
1 Min Read
Sharat Bachegowda

ಬೆಂಗಳೂರು: ತಾಯಿಗೆ ನಾನು ಮೋಸ ಮಾಡಲಿಲ್ಲ. ತಾಯಿಯೇ ನನ್ನ ತಬ್ಬಲಿ ಮಾಡಿದಳು ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಇಂದು ಹೊಸಕೋಟೆಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಆರ್ ಅಶೋಕ್ ಶರತ್ ಬಚ್ಚೇಗೌಡ ತಾಯಿಯಂತಹ ಪಕ್ಷಕ್ಕೆ ಮೋಸ ಮಾಡಿದ್ರು ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು. ನಾವು ಕಟ್ಟಿದ ಪಕ್ಷದಲ್ಲಿ ನಮಗೆ ಸ್ಥಾನ ಇಲ್ಲದಂತಾಗಿದೆ. ನಾವೆಲ್ಲೂ ಪಕ್ಷಕ್ಕೆ ಮೋಸ ಮಾಡಿಲ್ಲ. ಪಕ್ಷವೇ ನನ್ನ ತಬ್ಬಲಿ ಮಾಡಿದೆ ಎಂದು ತಿಳಿಸಿದ್ದಾರೆ.

r ashok

ನಾನು 2018ರಲ್ಲಿ ಎಲೆಕ್ಷನ್ ಗೆ ಬಿಜೆಪಿಯಿಂದ ನಿಲ್ಲುವುದರಲ್ಲಿ ಅಶೋಕಣ್ಣನ ಪಾತ್ರ ದೊಡ್ಡದಿದೆ. ಆದರೆ ಇವತ್ತು ನಾನು ಗಲಾಟೆ ಮಾಡಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ವಿದೇಶದಲ್ಲಿ ಓದಿದ್ದೇನೆ ಅಲ್ಲೆ ಕೆಲಸ ಕೂಡ ಮಾಡಿದ್ದೇನೆ. ಈಗ ನಾಡಿನ ಜನತೆಗೆ ಸೇವೆ ಮಾಡಲು ಇಲ್ಲಿ ಬಂದಿದ್ದೇನೆ. ನಾನೆಲ್ಲೂ ಗಲಾಟೆ ದೊಂಬಿ ಮಾಡಿಲ್ಲ. ಜನ ಇಲ್ಲಿ ಪ್ರೀತಿ ಅಭಿಮಾನದಿಂದ ಸೇರುತ್ತಿದ್ದಾರೆ ಎಂದು ಆರ್ ಅಶೋಕ್‍ಗೆ ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಹೊಸಕೋಟೆಯನ್ನು ಮಿನಿ ಬಿಹಾರ ಎಂದ ವಿಚಾರವಾಗಿ ಪ್ರತಿಕ್ರಿಯಿಸಿ, ಹೊಸಕೋಟೆ ಜನ ಮತ್ತು ಈ ಕ್ಷೇತ್ರ ನಮ್ಮ ತಾಯಿ ಇದ್ದಂತೆ. ಇದರ ಬಗ್ಗೆ ನಾವ್ಯಾರು ಕೆಟ್ಟದಾಗಿ ಮಾತಾಡಬಾರದು. ಆದರೆ ಅವರು ಇಂತಹ ಹೇಳಿಕೆ ನೀಡಿರುವುದು ಕ್ಷೇತ್ರದ ಬಗೆಗಿನ ಅವರ ಒಲವು ಎಂತಹದ್ದು ಎಂಬುದನ್ನು ತೋರಿಸುತ್ತದೆ ಎಂದು ಎಂಟಿಬಿ ವಿರುದ್ಧ ಕಿಡಿಕಾರಿದರು.

sharath0 mtb

ಸೋಮವಾರ ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಎಂಟಿಬಿ ನಾಗರಾಜು, ಯಾರು ಗತಿ ಇಲ್ಲದಕ್ಕೆ ಕಾಂಗ್ರೆಸ್ ಪಕ್ಷ ನನ್ನ ತಂದು ಈ ಮಿನಿ ಬಿಹಾರ್ ನಲ್ಲಿ ಚುನಾವಣೆಗೆ ನಿಲ್ಲಿಸಿದರು ಎಂದು ತಮ್ಮ ಸ್ವಕ್ಷೇತ್ರವನ್ನು ಬಿಹಾರಕ್ಕೆ ಹೋಲಿಕೆ ಮಾಡಿ ಎಡವಟ್ಟು ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *