– ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸ್ಥಿರ
ಬೆಂಗಳೂರು: ಮೂವತ್ತು ವರ್ಷಗಳ ಬಳಿಕ ಶನಿ ಮಕರ ರಾಶಿಯಿಂದ ಧನಸ್ಸು ರಾಶಿಗೆ ಪಥ ಬದಲಾವಣೆ ಮಾಡುತ್ತಾ ಇದ್ದಾನೆ. ಶನಿಪಥ ಬದಲಾವಣೆಯಿಂದ ಧನಸ್ಸು, ಮಕರ ಮತ್ತು ಕುಂಭ ರಾಶಿಯವರ ಮೇಲೆ ಗಾಢ ಪ್ರಭಾವ ಬೀಳಲಿದೆ. ಈ ಮೂರು ರಾಶಿಯವರಿಗೆ ಏಳೂವರೆ ವರ್ಷ ಶನಿ ಕಾಟ ಇರಲಿದೆ ಅಂತ ಖ್ಯಾತ ರೇಣುಕಾರಾಧ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಈ ಶನಿಕಾಟ ನಿವಾರಣೆಗೆ ಶನಿ ದೇವರನ್ನ ಪೂಜೆ ಮಾಡಬೇಕು ಮತ್ತು ಮಾಡಿರುವ ಕರ್ಮ ಹೋಗಲು ಸೇವಾ ಕಾರ್ಯಗಳನ್ನ ಮಾಡಬೇಕು. ಇಷ್ಟೇ ಅಲ್ಲದೆ ಮಕರ, ಕುಂಭ ಮತ್ತು ಧನಸ್ಸು ರಾಶಿ ಅವರು ಕಾಲ ಭೈರೇಶ್ವರ ಮತ್ತು ಹನುಮನ ಮಂತ್ರ ಪಠಣೆ ಮಾಡಬೇಕು ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?
ಮೀನ, ತುಲಾ, ವೃಶ್ಚಿಕ ರಾಶಿಯವರಿಗೆ ಶುಭ ಆಗಲಿದೆ ಜೊತೆಗೆ ಮೇಷ ರಾಶಿ ಅವರಿಗೆ ಶನಿ ಪ್ರವೇಶ ಆದ ಎರಡು ವರ್ಷದ ಬಳಿಕ ಶನಿ ಕಾಟ ಇರಲಿದ್ದು ಅಪಘಾತ ಮತ್ತು ಇನ್ನಿತರ ಸಮಸ್ಯೆಗಳು ಎದುರಾಗಲಿವೆ. ಮತ್ತೆ ಶನಿ ಪಥ ಬದಲಾವಣೆ ಪ್ರಕೃತಿ ಮತ್ತು ರಾಜಕೀಯದ ಮೇಲೂ ಗಾಢ ಪ್ರಭಾವ ಬೀರಲಿದೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?
ಶನಿ ಪಥ ಬದಲಾವಣೆಯಿಂದ ಪ್ರಕೃತಿಯಲ್ಲಿ ಭೂಕಂಪ ಮತ್ತು ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೆ, ರಾಜಕೀಯದಲ್ಲಿ ಗಾಢ ಪ್ರಭಾವ ಬೀರಲಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಯಡ್ಡಿ ಸರ್ಕಾರ ಸ್ಥಿರವಾಗಿರಲಿದೆ. ಆದರೆ ಸರ್ಕಾರ ನಡೆಸಬೇಕಾದರೆ ಜಂಜಾಟ ಮನಸ್ತಾಪ, ಗೊಂದಲಗಳು ಎದುರಾಗುತ್ತವೆ. ಮುರೂವರೆ ವರ್ಷ ಅಭಿವೃದ್ಧಿ ಕಾರ್ಯ ಆಗಲ್ಲ ಎಂದು ರೇಣುಕಾರಾಧ್ಯ ಗುರುಗಳು ತಿಳಿಸಿದ್ದಾರೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?