ಬೆಂಗಳೂರು: ಕಗ್ಗಲೀಪುರದಲ್ಲಿ (Kaggalipura) ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಾಣ ಆಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಬೆಂಗಳೂರು ದಕ್ಷಿಣದಲ್ಲಿಎರಡನೇ ವಿಮಾನ ನಿಲ್ದಾಣ ಭೂಸ್ವಾದೀನಕ್ಕೆ ಶಾರ್ಟ್ ಲಿಸ್ಟ್ ಮಾಡಿದ್ದರಿಂದ ಈ ಪ್ರಶ್ನೆ ಎದ್ದಿದೆ.
Advertisement
ಹೌದು. ಬೆಂಗಳೂರು ಬಿಡದಿಯ (Bidadi) ಕೆಲ ಭಾಗ ಕಗ್ಗಲಿಪುರ ಭಾಗದಲ್ಲಿ ಭೂಸ್ವಾದೀನಕ್ಕೆ ಪ್ಲ್ಯಾನ್ ಮಾಡಿದೆ ಎಂದು ಪಬ್ಲಿಕ್ ಟಿವಿಗೆ ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕಗ್ಗಲೀಪುರ ಬರುತ್ತದೆ.
Advertisement
ಈ ಹಿಂದೆ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ಲ್ಯಾನ್ ನಡೆದಿತ್ತು. ಆದರೆ ಈಗ ಬಿಡದಿ – ಕಗ್ಗಲಿಪುರ ಭಾಗದಲ್ಲಿ ಕೆಐಎಡಿಬಿ 4,800 ಎಕ್ರೆ ಭೂಸ್ವಾಧೀನಕ್ಕೆ ಶಾರ್ಟ್ ಲಿಸ್ಟ್ ಮಾಡಿದೆ.
Advertisement
ರಾಮನಗರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸಬೇಕು ಎಂದು ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಒತ್ತಾಯ ಮಾಡಿದ್ದರು. ಈ ಒತ್ತಾಯದ ಬೆನ್ನಲ್ಲೇ ವಿಮಾನ ನಿಲ್ದಾಣ ತರಲು ಪ್ಲ್ಯಾನ್ ಮಾಡಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ ಅಧ್ಯಕ್ಷ
Advertisement
ಕಳೆದ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ನಂತರ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲ್, ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ. ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ. ದಾಬಾಸ್ ಪೇಟೆ, ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಈ ಹಿಂದೆ ರಾಮನಗರ, ಕನಕಪುರ ಭಾಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್, ಈ ಭಾಗದ ಜನರಿಗೆ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಯನ್ನು ಮಾರಬೇಡಿ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದ್ದರಿಂದ ಆಸ್ತಿಯನ್ನ ಮಾರದೇ ಉಳಿಸಿಕೊಳ್ಳಿ. ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ. ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದಿದ್ದರು.