ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಕಳೆದ ವಾರ ಬಿಡುಗಡೆಗೊಂಡಿತ್ತು. ಅನ್ನದಾತರ ಬದುಕಿನ ಕಥೆ ಎಂದ ಮೇಲೆ ಅದರತ್ತ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಅಷ್ಟಕ್ಕೂ ಕನ್ನಡದ ಪ್ರೇಕ್ಷಕರೂ ಕೂಡ ಇಂತಹ ನೆಲದ ಕಂಪಿನ ಕಥೆಗಳಿಗಾಗಿ ಸದಾ ಕಾತರಿಸುತ್ತಿರುತ್ತಾರೆ. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಬಂದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಆ ನಂತರದಲ್ಲಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಸಾಗಿ ಬಂದ ರಣಹೇಡಿ ಕ್ರಮೇಣ ರಾಜ್ಯದ ರೈತರ ಪ್ರೀತಿಯನ್ನೂ ಪಡೆದುಕೊಂಡಿದೆ. ಇದು ರಣಹೇಡಿಗೆ ಮತ್ತಷ್ಟು ಶಕ್ತಿ ತುಂಬಿದೆ. ಯಾವುದೇ ಚಿತ್ರದ ಗೆಲುವಿನಲ್ಲಿ ರೈತಾಪಿ ವರ್ಗದ ಪಾತ್ರ ಬಹಳಷ್ಟಿದೆ. ಅವರದ್ದೇ ಬದುಕು ಬವಣೆಯ ಕಥೆ ಹೊಂದಿರೋ ರಣಹೇಡಿಯನ್ನು ರಾಜ್ಯದ ರೈತರೆಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ.
Advertisement
ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ರೈತ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅದನ್ನು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿಯೇ ನಿರೂಪಿಸಲಾಗಿದೆ. ಹಳ್ಳಿ ಜೀವನ ಅಂದಮೇಲೆ ಅಲ್ಲಿ ದ್ವೇಷ, ಅಸೂಯೆ, ಜಗಳ, ಕಾದಾಟಗಳೆಲ್ಲ ಇದ್ದಿದ್ದೇ. ಅದೇ ರೀತಿ ಇಲ್ಲಿಯೂ ಎರಡು ಫೈಟಿಂಗುಗಳಿವೆ. ಆದರೆ ಅದಕ್ಕೆ ಯಾವುದೇ ಬಿಲ್ಡಪ್ಪುಗಳನ್ನು ಅಳವಡಿಸಲಾಗಿಲ್ಲ. ಆ ನೈಜತೆಯಲ್ಲಿಯೂ ಈ ಸಾಹಸ ಸನ್ನಿವೇಶಗಳು ಮಿರುಗುವಂತೆ ಕಟ್ಟಿ ಕೊಡಲಾಗಿದೆ. ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಮೂಡಿ ಬಂದಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಜನ ಮೆಚ್ಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ಚಿತ್ರವೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
Advertisement
Advertisement
ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕರಾದ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿತ್ತು. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂತಹ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ವಿಚಾರವೇ ರೈತ ಸಂಕುಲ ಇದರತ್ತ ಆಕರ್ಷಣೆಗೀಡಾಗಲು ಕಾರಣವಾಗಿದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ದೇಸೀ ಸಾಹಸ ಸನ್ನಿವೇಶಗಳೂ ಇವೆ. ಒಟ್ಟಾರೆಯಾಗಿ ಈ ಭಿನ್ನ ಹೂರಣವೇ ಜನರಿಗೆ ಹಿಡಿಸಿದೆ. ಇದರಿಂದಾಗಿಯೇ ಅಮೋಘ ಗೆಲುವು ರಣಹೇಡಿಯ ಕೈಹಿಡಿಯುವ ಸಾಧ್ಯತೆಗಳು ಮಿರುಗಲಾರಂಭಿಸಿವೆ.