– ಜಪಾನ್‌ಗೆ 4 ಆನೆ ನೀಡಿ, ಚೀತಾ, ಜಾಗ್ವಾರ್, ಪೂಮಾ, ಚಿಂಪಾಂಜಿ, ಕ್ಯಾಪುಚಿನ್ ಕೋತಿ ತರಲು ಸಿದ್ಧತೆ
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ (Bannerghatta Biological Park) ಇತಿಹಾಸದಲ್ಲೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.
ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ (Himeji Central Park) ಜೊತೆ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳಾದ ಸುರೇಶ್ (8), ಗೌರಿ ( 9 ), ಶೃತಿ (7) ತುಳಸಿ (5) ಜಪಾನ್‌ಗೆ ನೀಡಿ, ಪ್ರತಿಯಾಗಿ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳನ್ನು ತರಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್‌ವೇಸ್‌ನ ಸರಕು ವಿಮಾನ B777-200F ದಲ್ಲಿ ಜಪಾನ್ ದೇಶದ ಒಸಾಕಾ ಕಾನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಆಗಲಿವೆ. ಸುಮಾರು 20 ಗಂಟೆಗಳ ಪ್ರಯಾಣಕ್ಕೆ ತಯಾರಿ ಮಾಡಲಾಗಿದೆ. ಈಗಾಗಲೇ ಆನೆಗಳಿಗೆ ವಿಮಾನ ಪ್ರಯಾಣಕ್ಕೆ ತರಬೇತಿ ನೀಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ತೆರಳಲಿದ್ದಾರೆ. ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ತರಬೇತಿ ನೀಡಲು ಅವರು ತೆರಳಲಿದ್ದಾರೆ. ಎರಡು ವಾರಗಳ ಕಾಲ ಹಿಮೇಜಿ ಪಾರ್ಕ್ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ