-ಪಕ್ಕಾ ಸೇರ್ತೀರಿ ಆಸ್ಪತ್ರೆ ಬೆಡ್ಡು!
ಬೆಂಗಳೂರು: ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಆನ್‍ಲೈನ್ ಫುಡ್ ತಯಾರುಗವ ಸ್ಥಳದ ದೃಶ್ಯಗಳು ಸೆರೆಯಾಗಿವೆ.
ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ ಕಿಚನ್ ಹಾಗೂ ಈಟ್‍ವೆಲ್ ಎಂಬ ಹೋಟೆಲ್ ಪಬ್ಲಿಕ್ ಟಿವಿ ತಂಡ ಪ್ರವೇಶ ಮಾಡಿತ್ತು. ಅಲ್ಲಿ ವರ್ಷಗಟ್ಟಲೇ ಪೇಂಟ್ ಬಳಿಯದ ಗೋಡೆ, ಸಿಕ್ಕಸಿಕ್ಕ ಕಡೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರೋ ಪಾತ್ರೆ ಪಗಡೆ, ಕೊಳಚೆ ನೀರಿನ ನಡುವೆ ಹರಿದಾಡ್ತಿರೋ ಜಿರಳೆ, ಹುಳಹುಪ್ಪಟೆಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿಯೇ ನೀವು ಆರ್ಡರ್ ಮಾಡೋ ವೈರೆಟಿ ವೈರೆಟಿ ಫುಡ್ ತಯಾರಾಗುತ್ತದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್
ಅನರ್ವ್ ಎಂಬವರು ಆನ್‍ಲೈನ್ ಮೂಲಕ ಇಲ್ಲಿಯ ಊಟವನ್ನು ಆರ್ಡರ್ ಮಾಡಿದ್ದರು. ಕೈ ಬಂದ ಪಾರ್ಸೆಲ್ ತೆಗೆದಾಗ ಅನರ್ವರಿಗೆ ಜಿರಳೆ ಕಾಣಿಸಿಕೊಂಡಿದೆ. ಕರಾವಳಿ ಕಿಚ್ಚನ್ ಹೆಸರಿನ ಹೋಟೆಲ್‍ನಿಂದ ತರಿಸಿದ್ದ ಕೊಳಕು ಆಹಾರ ಹಿಡಿದು ಹೋಟೆಲ್ ನತ್ತ ಹೆಜ್ಜೆ ಹಾಕಿದ್ದರು. ತಮ್ಮ ಹಣವನ್ನ ವಾಪಾಸ್ಸು ನೀಡುವಂತೆ ಕೇಳಿ ಹೋಟೆಲ್ ಅಡುಗೆ ಕೋಣೆ ಒಳಗೆ ಹೋದಾಗ ಅನರ್ವ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಕೊಳಕಿನಲ್ಲೇ ಕೊಳಕು ಕೈಯ ಅಡುಗೆ ಭಟ್ಟ ಅಲ್ಲಿಲ್ಲಿ ಮುಟ್ಕೊಂಡು ಪರೋಟದ ಉಂಡೆಯನ್ನ ಕಟ್ಟುತ್ತಿದ್ದ ಎಂದು ಅನರ್ವ್ ಪಬ್ಲಿಕ್ ಟಿವಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ