ಬೆಂಗಳೂರು: ಚಂದನವನದ ಪ್ರೇಮಲೋಕದ ಕನಸುಗಾರ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ತಮ್ಮ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ.
ರವಿಚಂದ್ರನ್ ಅವರ ವಿವಾಹ ವಾರ್ಷಿಕೋತ್ಸವದ ಇನ್ನೊಂದು ವಿಶೇಷವೆನೆಂದರೆ, ಪ್ರೀತಿ ಪ್ರೇಮ ಎಂಬ ಪದಕ್ಕೆ ಸಮಾನದ ಅವರ ಮದುವೆ ಪ್ರೇಮಿಗಳ ದಿನದೊಂದು ನೇರವೇರಿದೆ. ಹೌದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಮದುವೆಯಾಗಿದ್ದಾರೆ.
ನಿರ್ದೇಶಕ ಎನ್ ವೀರಸ್ವಾಮಿ ಪುತ್ರನಾಗಿ 1961 ಮೇ 30ರಂದು ಜನಿಸಿದ ವೀರಸ್ವಾಮಿ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಆರ್ ಸುಮತಿ ಅವರನ್ನು ವಿವಾಹವಾದರು. ಈ ದಂಪತಿ ವಿವಾಹವಾಗಿ ಇಂದಿಗೆ 33 ವರ್ಷಗಳಾಗಿವೆ. ನಟ, ನಿರ್ದೇಶಕ ನಿರ್ಮಾಪಕನಾಗಿ ಮಿಂಚಿದ್ದ ರವಿಚಂದ್ರನ್ ಅವರು ಒಳ್ಳೆಯ ಪತಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಈ ದಂಪತಿಗೆ ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.
ರವಿಚಂದ್ರನ್ ಅವರ ಗಂಡು ಮಕ್ಕಳಿಬ್ಬರು ಅಪ್ಪನ ಹಾಗೇ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಕಳೆದ ವರ್ಷವಷ್ಟೇ ಮಗಳು ಗೀತಾಂಜಲಿಯನ್ನು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳ 29 ರಂದು ಮಗಳು ಗೀತಾಂಜಲಿಯನ್ನು ಉದ್ಯಮಿ ಅಜಯ್ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಂತೆ ಮಗಳು ಮದುವೆಯನ್ನು ಸಖತ್ ಅದ್ಧೂರಿಯಾಗಿ ಮತ್ತು ವಿಶಿಷ್ಟವಾಗಿ ಮಾಡಿದ್ದರು.
ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಕೋರಿರುವ ಮಗ ಮನೋರಂಜನ್, ನಮ್ಮ ಜೀವನದ ಏಳು ಬೀಳಿನಲ್ಲಿ ನೀವು ಜೊತೆಗೆ ಇದ್ದೀರಿ. ನೀವು ನಮಗೆ ಪ್ರೀತಿ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದೀರಾ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ ಎಂದು ಬರೆದುಕೊಂಡಿದ್ದಾರೆ.
ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ರವಿಂಚದ್ರನ್ ಅವರು, ರವಿ ಬೋಪಣ್ಣ, ರವಿಚಂದ್ರ, ರಾಜೇಂದ್ರ ಪೊನ್ನಪ್ಪ ಎಂಬ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ವಿಶೇಷವೆನೆಂದರೆ ರವಿ ಬೋಪಣ್ಣ ಹಾಗೂ ರಾಜೇಂದ್ರ ಪೊನ್ನಪ್ಪ ಈ ಎರಡು ಸಿನಿಮಾಗಳನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
https://www.instagram.com/p/B8iE7FOgBDT/