ನಾನು ಹೈದರಾಬಾದ್‌ನಲ್ಲಿ ಇದ್ದೇನೆ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದ ತೆಲುಗು ನಟಿ ಹೇಮಾ (Actress Hema) ಆ್ಯಂಡ್ ಟೀಮ್‌ಗೆ ಸಿಸಿಬಿ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾದ ರಶ್ಮಿಕಾ ಮಂದಣ್ಣ
Advertisement
ಬೆಂಗಳೂರಿನ ರೇವ್ ಪಾರ್ಟಿ (Rave Party) ಪ್ರಕರಣದ ವಿಚಾರಣೆಗೆ ತೆಲುಗು ಸಿನಿಮಾ ನಟಿ ಹೇಮಾ ಸೇರಿದಂತೆ ಇತರರು ಗೈರಾಗಿದ್ದಾರೆ. ಸೋಮವಾರ (ಮೇ 27) ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾ ಸೇರಿ ಎಂಟು ಮಂದಿಗೆ ಸಿಸಿಬಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಿ ಸಿಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ನಟಿ ಹೇಮಾ ಆ್ಯಂಡ್ ಟೀಮ್‌ಗೆ ಸಿಸಿಬಿ ಅಧಿಕಾರಿಗಳು ಎರಡನೇ ನೋಟಿಸ್ (Notice) ನೀಡಿದ್ದಾರೆ.
Advertisement
Advertisement
ಪಾರ್ಟಿ ಆಯೋಜನೆ ಮಾಡಿದ್ದ ವಾಸು, ಅರುಣ್, ಸಿದ್ದಿಕಿ, ನಾಗಬಾಬು ಸೇರಿ ಐವರಿಗೆ ಮೇ 27ರಂದು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಕೋರ್ಟ್ ಆದೇಶಿಸಿದೆ. ಇಂದಿನಿಂದ (ಮೇ 28) ಐವರು ಆರೋಪಿಗಳಿಗೆ ರೇವ್ ಪಾರ್ಟಿ ಆಯೋಜನೆ ಹಾಗೂ ಡ್ರಗ್ಸ್ ಸಪ್ಲೈ ಬಗ್ಗೆ ವಿಚಾರಣೆ ಮಾಡಲಿದ್ದಾರೆ ಸಿಸಿಬಿ ಅಧಿಕಾರಿಗಳು.
Advertisement
ಅಂದಹಾಗೆ, ರೇವ್ ಪಾರ್ಟಿ ವಿಚಾರ ಬಯಲಾಗುತ್ತಿದ್ದಂತೆಯೇ ನಟಿ ಹೇಮಾ ಅವರು ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ವೀಡಿಯೋದಲ್ಲಿ ನಾನು ಹೈದರಾಬಾದ್‌ನಲ್ಲಿ ಇರುವುದಾಗಿ ಹೈಡ್ರಾಮಾ ಮಾಡಿದ್ದರು. ಇತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಹೇಮಾ ಅವರು ಡ್ರಗ್ಸ್ ಪಾರ್ಟಿಯಲ್ಲಿ ಇದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದರು.
ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಹೇಳಿದ್ದರು. ಅಲ್ಲದೇ ಪಾರ್ಟಿಯಲ್ಲಿ ಭಾಗವಹಿಸಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿತ್ತು.
73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಮಹಿಳೆಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು.