ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಶಿವರಾಜ್ ಕೆಆರ್ ಪೇಟೆ ಅವರು ಕೊರೊನಾ ಲಾಕ್‍ಡೌನ್ ಮಧ್ಯೆ ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಯಾರು ಮನೆಯಿಂದ ಹೊರೆಗೆ ಬರುತ್ತಿಲ್ಲ. ಅಂಗಡಿಗಳು ಎಲ್ಲವೂ ಮುಚ್ಚಿದೆ. ಈ ನಡುವೆ ಕೇಕ್ ಸಿಗದೆ ಇದ್ದರೂ ಇಂದು ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿರುವ ಶಿವರಾಜ್ ಅವರು, ಮನೆಯಲ್ಲೇ ಮಾಡಿದ ರಾಗಿಮುದ್ದೆ ಕೇಕ್ ಕಟ್ ಮಾಡಿ ಕುಟುಂಬದ ಜೊತೆ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ.
.. #birthdayinquarantine 🙂 special #Mudde #cake ???? #bassaaru … Here's how #Shivarajkrpete celebrates his #birthday with his family during #lockdown ????
Here's wishing the #actor #huttuhabbadasubhashayagalu #happybirthdayShivrajkrpete pic.twitter.com/lFXOUeYKeW
— A Sharadhaa (@sharadasrinidhi) April 4, 2020
ಲಾಕ್‍ಡೌನ್ ಮಧ್ಯೆ ಕುಟುಂಬದ ಜೊತೆ ಕಾಲಕಳೆಯುತ್ತಿರುವ ಶಿವರಾಜ್ ಕೆ.ಆರ್ ಪೇಟೆಯವರು, ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಮುದ್ದೆಯನ್ನು ಕೇಕ್ ರೀತಿ ಮಾಡಿ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಮಗ, ಹೆಂಡತಿ ಹಾಗೂ ಅಕ್ಕ, ಅಕ್ಕನ ಗಂಡ ಮತ್ತು ಮಗಳು ರಾಗಿಮುದ್ದೆ ಕೇಕ್ ಅನ್ನು ಬಸ್ಸಾರಿನ ಜೊತೆ ತಿಂದು ಖುಷಿಪಟ್ಟಿದ್ದಾರೆ.
ಈ ವಿಡಿಯೋದಲ್ಲಿ ಮಾತನಾಡಿರುವ ಶಿವರಾಜ್ ಅವರು, ಈ ರೀತಿಯ ಹುಟ್ಟುಹಬ್ಬವನ್ನು ಯಾರೂ ಕೂಡ ಆಚರಣೆ ಮಾಡಿಕೊಂಡಿರುವುದಿಲ್ಲ. ಇದು ನಿಜವಾಗಿ ಕೇಕ್ ಅಲ್ಲ ಇದನ್ನು ರಾಗಿಮುದ್ದೆಯಿಂದ ಮಾಡಲಾಗಿದೆ. ರಾಗಿಮುದ್ದೆ ಕೇಕ್ ಮಾಡಿ ನನ್ನ ಹುಟ್ಟುಹಬ್ಬ ಮಾಡುತ್ತಿರುವ ನನ್ನ ಕುಟುಂಬದವರಿಗೂ ಮತ್ತು ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಮಾಡಿಕೊಂಡಿರುವ ಶಿವರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯವಾದ ಶಿವರಾಜ್, ಇಂದು ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ಪೋಷಕನಟ ಮತ್ತು ಹಾಸ್ಯನಟನಾಗಿ ಮಿಂಚುತ್ತಿದ್ದಾರೆ. ಜೊತೆಗೆ ನಾನು ಮತ್ತು ಗುಂಡ ಎಂಬ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.
https://www.instagram.com/p/BpNGsQiApd9/
ಶಿವರಾಜ್ ಕೆ.ಆರ್ ಪೇಟೆ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಅವರು, ಈಗ ದರ್ಶನ್ ಅಭಿನಯದ ರಾಬರ್ಟ್, ನಿಖಿಲ್ ಕುಮಾರ್ ಅಭಿನಯದ ಇನ್ನು ಹೆಸರಿಡದ ಸಿನಿಮಾ, ಬಂಪರ್, ಮದಗಜ ಮತ್ತು ಪುರುಸೊತ್ ರಾಮ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.