ಬೆಂಗಳೂರು: ನಗರವಾಸಿಗಳನ್ನು ಹೈರಾಣಾಗಿಸಿರುವ ಬೆಂಗಳೂರಿನ ರಸ್ತೆಗುಂಡಿಗಳು (Bengaluru Potholes) ಇದೀಗ ಮತ್ತೊಬ್ಬ ಯುವಕನನ್ನು ಬಲಿ ಪಡೆದಿದೆ.
ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೇರಳ (Kerala) ಮೂಲದ ಯುವಕ ಅರ್ಷದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಂದೇ ದಿನದಲ್ಲಿ ಕಾಡಿನಲ್ಲಿ ಶೂಟಿಂಗ್ – ಟವೆಲ್ ಸುತ್ತಿಕೊಂಡು ಅಭಿನಯಿಸಿದ್ದೆ
Advertisement
Advertisement
ಬೈಕ್‌ನಲ್ಲಿ (Bike) ತೆರಳುತ್ತಿದ್ದ ಅರ್ಷದ್ ಭಾರೀ ಗಾತ್ರದ ರಸ್ತೆಗುಂಡಿ ಕಂಡು ತಕ್ಷಣ ಬ್ರೇಕ್‌ಹಾಕಿದ್ದಾನೆ, ಇದರಿಂದ ಬೈಕ್ ಸ್ಕಿಡ್ ಆಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು (Car) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಅರ್ಷದ್ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ
Advertisement
Advertisement
ಬೈಕ್ ಸವಾರನನ್ನು ತಪ್ಪಿಸಲು ಹೋಗಿ ತಾನೂ ಆಳವಾದ ಗುಂಡಿಗೆ ಬಿದ್ದು ಕಾರು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ ಬಿಟಿಎಂ ಲೇಔಟ್‌ನ (BTM layout) ಕುವೆಂಪು ನಗರ ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ಸವಾರ ಶಿವಕುಮಾರ್ (35) ಸ್ಥಳದಲ್ಲೇ ಮೃತಪಟ್ಟಿದ್ದರು.
ರಸ್ತೆ ಗುಂಡಿಗೆ ಅನೇಕ ಜೀವಗಳು ಬಲಿ:
ರಸ್ತೆ ಅಪಘಾತ ಇದೇ ಮೊದಲೇನಲ್ಲ ಕಳೆದ ವಾರ ಜೆ.ಸಿ.ನಗರದ ನಿವಾಸಿಯಾಗಿರುವ 38 ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು. ಇದನ್ನೂ ಓದಿ: ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR
ಸುಜಾತಾ ಥಿಯೇಟರ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯ ಬಸ್ ಗುದ್ದಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳು ರಸ್ತೆ ಬಿದ್ದಿದ್ದರು. ಬಿದ್ದು ಬಸ್ ಅಡಿ ಸಿಲುಕಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.