ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ನಿನ್ನೆ ಮಧ್ಯರಾತ್ರಿ ಕೋರಮಂಗಲದ (Kormangala) ಮುಖ್ಯ ರಸ್ತೆಯಲ್ಲಿ 40 ಸಾವಿರಕ್ಕೂ ಅಧಿಕ ಜನ ಒಂದೇ ಜಾಗದಲ್ಲಿ ಸೇರಿದ್ರು. 100ಕ್ಕೂ ಹೆಚ್ಚು ಬಾರ್, ಪಬ್, ರೆಸ್ಟೋರೆಂಟ್‍ಗಳು ಕಿಕ್ಕಿರಿದಿದ್ದವು. ಖಾಸಗಿ ಪಬ್ ಕಾರಿಡರ್‌ನಲ್ಲಿ ಪ್ರೇಮಿಗಳು ಮೈಮರೆತು ಅಸಭ್ಯವಾಗಿ ವರ್ತಿಸ್ತಿದ್ರು. ಇದನ್ನು ನೋಡ್ಕೊಂಡು ರಸ್ತೆ ಬ್ಲಾಕ್‍ಮಾಡಿ ನಿಂತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.
Advertisement
ಪಬ್‍ಗಳೆಲ್ಲವೂ ಹೌಸ್ ಫುಲ್ ಆಗಿದ್ದವು. 12 ಗಂಟೆಯ ನಂತರ ಪಬ್‍ಗಳಿಂದ ಹೊರ ಬಂದ ನೂರಾರು ಯುವತಿಯರು, ಕುಡಿದು ಅಮಲು ಹೆಚ್ಚಾಗಿ ಬೀದಿ ಬೀದಿಗಳಲ್ಲಿ ಬಿದ್ದಿದ್ರು. ರಾಣಿ ಚೆನ್ನಮ್ಮ ಪಡೆ, ಮಹಿಳಾ ಪೊಲೀಸರು ಕುಡಿದು ಪ್ರಜ್ಞೆ ತಪ್ಪಿ ಬಿದ್ದ ಯುವತಿಯರನ್ನು ಪೊಲೀಸ್ ಚೌಕಿಗಳಲ್ಲಿ ಬಿಟ್ಟು ಕಂಟ್ರೋಲ್ ಮಾಡಿದ್ರು. ಇನ್ನೊಂದೆಡೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಗಲಾಟೆ ನಡೀತು. ಬಳಿಕ ಪೊಲೀಸರು ಜನಜಂಗುಳಿಯನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಹೊಸ ವರ್ಷದಲ್ಲಿ ಮದ್ಯಪ್ರಿಯರಿಂದ ಭರ್ಜರಿ ಆದಾಯ – ಅಬಕಾರಿ ಇಲಾಖೆಗೆ ಚಿನ್ನದ ಬೆಳೆ
Advertisement
#WATCH | Karnataka: Bengaluru police lathi-charged to disperse the huge crowd after it went out of control. pic.twitter.com/yRMdyBSHww
— ANI (@ANI) December 31, 2022
Advertisement
ಈ ನಡುವೆ ನಗರದಲ್ಲಿ ನಡೆದ ನ್ಯೂ ಇಯರ್ ಸೆಲೆಬ್ರೇಷನ್ (New Year Celebration) ದೊಡ್ಡ ದಾಖಲೆ ಎಂದೇ ಹೇಳಬಹುದು. ಯಾಕಂದ್ರೆ ಪೊಲೀಸರು (Police) ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬ್ರಿಗೇಡ್ ರೋಡ್ (Brigade Road), ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ (MG Road) ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ
Advertisement
ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.