– ಪ್ರಾಣಿದಯಾ ಸಂಘದಿಂದ ಖಂಡನೆ
ಬೆಂಗಳೂರು: ಪೊಲೀಸರೇ ಮಾನವೀಯತೆ ಮರೆತು ಮೂಕ ಪ್ರಾಣಿಯ ಮೇಲೆ ಹೊಯ್ಸಳ ವಾಹನ ಹತ್ತಿಸಿದ ಘಟನೆ ಬೆಂಗಳೂರಿನ ಕೆ.ಆರ್ ಪುರಂನಲ್ಲಿ ನಡೆದಿದೆ.
ಭಾನುವಾರ ಕೆ.ಆರ್ ಪುರಂನಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಗಸ್ತು ತಿರುಗುವಾಗ ಹೊಯ್ಸಳ ವಾಹನ ನಾಯಿಯ ಮೇಲೆ ಹಾದು ಹೋಗಿದೆ. ನಾಯಿ ಎಷ್ಟೆ ಕಿರುಚಾಡಿದ್ರೂ ಅದನ್ನ ತಿರುಗಿಯೂ ನೋಡದಂತೆ ಪೊಲೀಸರು ಹೋಗಿದ್ದಾರೆ. ಈ ವೇಳೆ ಸ್ಥಳೀಯರು ನಾಯಿಯನ್ನ ರಕ್ಷಿಸಿ, ಪ್ರಾಣಿದಯಾ ಸಂಘಕ್ಕೆ ಮಾಹಿತಿ ನೀಡಿದ್ದಾರೆ.
Advertisement
Advertisement
ಪೊಲೀಸರ ಈ ವರ್ತನೆಯನ್ನ ತೀವ್ರವಾಗಿ ಖಂಡಿಸಿದ ಪ್ರಾಣಿದಯಾ ಸಂಘ, ಈ ವಿಷಯವನ್ನ ಬೆಂಗಳೂರು ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ನಾಯಿಯ ಮೇಲೆ ವಾಹನ ಹತ್ತಿಸಿದವರ ವಿರುದ್ಧ ದೂರು ನೀಡಲು ಮುಂದಾಗಿದೆ. ಜನಸಾಮಾನ್ಯರಿಗೆ ಬುದ್ಧಿ ಹೇಳುವ ಪೊಲೀಸರೇ ಕರ್ನಾಟಕ ಪೊಲೀಸ್ ಅಧಿನಿಯಮ 1963 ಕಾಯ್ದೆಯನ್ನ ಉಲ್ಲಂಘಿಸಿ, ನಾಯಿಗೆ ಹಿಂಸೆ ನೀಡಿ ರಕ್ಷಿಸದೇ ಹೋಗಿರೋದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement