ಬೆಂಗಳೂರು: ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಇಂದು (ಶುಕ್ರವಾರ) ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯುತ್ತಿದೆ. ಪಂದ್ಯದ ವೇಳೆ ವ್ಯಕ್ತಿಯೊಬ್ಬ ಹಮಾಸ್ ಬಾವುಟ (Hamas Flag) ಪ್ರದರ್ಶಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಕ್ರೀಡಾಂಗಣದ ಒಳಭಾಗದಲ್ಲಿ ಹಮಾಸ್ ಬಾವುಟ ಪ್ರದರ್ಶನ ಮಾಡಿದ್ದಾನೆ. ತಕ್ಷಣ ಕಬ್ಬನ್ ಪಾರ್ಕ್ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಗೋ ಬ್ಯಾಕ್ ರಿಜ್ವಾನ್; ಬೆಂಗ್ಳೂರಲ್ಲಿ ಪಾಕ್ ಕ್ರಿಕೆಟಿಗರ ವಿರುದ್ಧ ಹಿಂದೂ ಕಾರ್ಯಕರ್ತರ ಪ್ರತಿಭಟನೆ
14 ದಿನಗಳ ಹಿಂದೆ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಹಮಾಸ್ ವಿರುದ್ಧ ಇಸ್ರೇಲ್ ಪ್ರಧಾನಿ ಯುದ್ಧ ಘೋಷಿಸಿದರು. ಪರಿಣಾಮ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ಇನ್ನೂ ನಿಂತಿಲ್ಲ. ಈ ಸಂಘರ್ಷದಿಂದಾಗಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ.
ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯಲ್ಲಿ ಪರಿಸ್ಥಿತಿ ಡೋಲಾಯಮಾನವಾಗಿದೆ. ಅಲ್ಲಿನ ಜನ ಅನ್ನ, ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗಾಜಾದ ಆಸ್ಪತ್ರೆ ಮೇಲೆ ದಾಳಿ ನಡೆದಿತ್ತು. ಇಲ್ಲಿ ಕೂಡ ಹಲವಾರು ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: World Cup 2023: ದಾಖಲೆ ಸೃಷ್ಟಿಸಿದ ವಾರ್ನರ್, ಮಿಚೆಲ್ ಮಾರ್ಷ್ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ
ಇಸ್ರೇಲ್-ಹಮಾಸ್ ಸಂಘರ್ಷ ಕುರಿತು ಜಾಗತಿಕ ನಾಯಕರು ಪ್ರತಿಕ್ರಿಯಿಸಿದ್ದಾರೆ. ಭಾರತ ಸೇರಿ ಹಲವು ದೇಶಗಳ ನಾಯಕರು ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದಾರೆ. ಅಮೆರಿಕ ಪ್ರಧಾನಿ ಇಸ್ರೇಲ್‌ಗೆ ರಕ್ಷಣಾ ವ್ಯವಸ್ಥೆಯ ಸಹಾಯಹಸ್ತ ಚಾಚಿದ್ದಾರೆ.
Web Stories