ಬೆಂಗಳೂರು: 11 ತಿಂಗಳ ಹೆಣ್ಣು ಮಗವನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯನ್ನು ಸಿಲಿಕಾನ್ ಸಿಟಿಯ ಜ್ಞಾನಭಾರತಿ ಪೊಲೀಸರು ಬರೋಬ್ಬರಿ 250 ಕಿ.ಮೀ ಚೇಸಿಂಗ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಉತ್ತರ ಭಾರತ ಮೂಲದ ದಂಪತಿಯ ಹೆಣ್ಣು ಮಗುವನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಉತ್ತರ ಭಾರತ ಮೂಲದ ಚಂದನ್ ಮತ್ತು ರಾಣಿ ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಬಂದಿದ್ದು ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ಚಂದನ್ ಹಾಗೂ ರಾಣಿಗೆ ಆರೋಪಿ ಕುಮಾರ್ ಕುಟುಂಬ ಸ್ನೇಹಿತ ಆಗಿದ್ದನು.
Advertisement
ಕುಮಾರ್ ತನ್ನ ಸ್ನೇಹಿತ ಚಂದನ್ ಮನೆಗೆ ಆಗಾಗ ಬರುತ್ತಿದ್ದನು. ಈ ವೇಳೆ ಕುಮಾರ್ ಮನೆಯಲ್ಲಿದ್ದ 11 ತಿಂಗಳ ಹೆಣ್ಣು ಮಗುವನ್ನು ನೋಡಿದ್ದಾನೆ. ಬಳಿಕ ಜನವರಿ 16ರಂದು ಚಂದನ್ ಹಾಗೂ ರಾಣಿ ಮನೆ ಖಾಲಿ ಮಾಡಲು ಮುಂದಾಗಿದ್ದರು. ಈ ವೇಳೆ ಸಹಾಯಕ್ಕಾಗಿ ಕುಮಾರ್‍ನನ್ನು ಕರೆದಿದ್ದರು. ಮನೆ ವಸ್ತುಗಳನ್ನು ಸಾಗಿಸುವ ನೆಪದಲ್ಲಿ ಕುಮಾರ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ.
Advertisement
Advertisement
ಕುಮಾರ್ ಮಗುವಿನೊಂದಿಗೆ ತಮಿಳುನಾಡಿಗೆ ಕಾರಿನಲ್ಲಿ ಪರಾರಿಯಾಗಿದ್ದ. ಮಗುವನ್ನು ಕಿಡ್ನಾಪ್ ಮಾಡಿ ಕುಮಾರ್ 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ತಮಿಳುನಾಡಿನಲ್ಲಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸರು ಬರೋಬ್ಬರಿ 250 ಕಿ.ಮೀ ಚೇಸಿಂಗ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಪೊಲೀಸರು ತಮಿಳುನಾಡು ಹೈವೇಯಲ್ಲಿ ನೂರಾರು ಕಿಲೋಮೀಟರ್ ಚೇಸ್ ಮಾಡಿ ಆರೋಪಿ ಕುಮಾರ್‍ನನ್ನು ಹಿಡಿದು, ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಮಾರ್ ಅಂಡ್ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv