ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಸದ್ದಿಲ್ಲದೆ ಸುದ್ದಿ ಮಾಡಿದ್ದ ಗೋವಿಂದರಾಜು ಡೈರಿ ಈಗ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಡೈರಿಯ ಹಿಂದೆ ದುಂಬಾಲು ಬಿದ್ದಿರೋ ಪೊಲೀಸ್ರು ಕಾನೂನು ಸಮರ ಈಗ ಆರಂಭಿಸಿದ್ದಾರೆ.
ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಡೈರಿ ಪುರಾಣ ನಿಮಗೆಲ್ಲಾ ಗೊತ್ತೇ ಇದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಿಂದ ಕಳುಹಿಸಿದ ಹಣದ ಬಗ್ಗೆ ಪಿನ್ ಟು ಪಿನ್ ಮಾಹಿತಿ ಉಲ್ಲೇಖವಾಗಿದೆ. ಆದ್ರೆ ಅದೆಲ್ಲವನ್ನು ಎಂಎಲ್‍ಸಿ ಗೋವಿಂದರಾಜು ತಳ್ಳಿಹಾಕಿದ್ರು. ಡೈರಿ ನನ್ನದಲ್ಲ ಐಟಿ ಅಧಿಕಾರಿಗಳೇ ನನ್ನ ಮನೆಗೆ ತಂದು ಇಟ್ಟು ಆ ಬಳಿಕ ಲೀಕ್ ಮಾಡಿದ್ದಾರೆ ಅಂತಾ ಇಂದಿರಾನಗರ ಪೊಲೀಸರಿಗೆ ಗೋವಿಂದ ರಾಜು ದೂರು ನೀಡಿದ್ರು. ಇದೀಗ ಡೈರಿ ಪರಿಶೀಲನೆ ಮಾಡ್ಬೇಕು ನಮಗೆ ಹಸ್ತಾಂತರ ಮಾಡಿ ಅಂತಾ ಸಿಆರ್‍ಪಿಸಿ ಕಾನೂನಿನ ಅನ್ವಯ ಐಟಿ ಅಧಿಕಾರಿಗಳ ವಿರುದ್ಧ ಪೊಲೀಸರೇ ಹೋರಾಟಕ್ಕೆ ಇಳಿದಿದ್ದಾರೆ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕಿದ್ದ ಡೈರಿಯನ್ನ ಬೆಂಗಳೂರು ಪೊಲೀಸರು ತನಿಖೆಗೆ ಬೇಕೆಂದು ಐಟಿಗೆ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ.
Advertisement
Advertisement
ಇದನ್ನೂ ಓದಿ: ಕಾಂಗ್ರೆಸ್ – ಬಿಜೆಪಿ ನಡುವಿನ ಡೈರಿ ಜಗಳಕ್ಕೆ ಮೋದಿ ಎಂಟ್ರಿ!
Advertisement
ನಾವೂ ತನಿಖೆ ಮಾಡ್ಬೇಕು: ಮೌಖಿಕವಾಗಿ ಕೇಳಿದ್ರೂ ಪ್ರಯೋಜನವಾಗದಿದ್ದಾಗ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ. ಇಷ್ಟು ದಿನ ನೀವು ತನಿಖೆ ನಡೆಸುತ್ತಿದ್ದ ಕಾರಣಕ್ಕೆ ಡೈರಿ ಕೊಡೋದು ಸೂಕ್ತವಲ್ಲ ಎಂದಿದ್ದೀರಿ. ಆ ವೇಳೆ ನಾವು ತೊಂದರೆ ಕೊಡೋದು ಸರಿಯಲ್ಲ ನಾವೂ ಕೂಡ ಸುಮ್ಮನೆ ಇದ್ವಿ. ತನಿಖೆಯ ನೆಪದಲ್ಲಿ ಕಾಲ ತಳ್ಳುತ್ತಿರುವ ನೀವು ನಮ್ಮ ತನಿಖೆಯನ್ನು ಹಳ್ಳ ಹಿಡಿಸುತ್ತಿದ್ದೀರಿ ಇದು ಸರಿಯಲ್ಲ ಅಂತಾ ಪೊಲೀಸರು ಆದಾಯ ಇಲಾಖೆಗೆ ಖಾರವಾಗಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಇದನ್ನೂಓದಿ: ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!
ಡೈರಿ ಸಿಕ್ಕ ದಿನದಿಂದಲೂ ನನ್ನದಲ್ಲ ಅಂತಾ ವಾದಿಸುತ್ತಿರುವ ಎಂಎಲ್‍ಸಿ ಗೋವಿಂದರಾಜುಗೆ ಐಟಿ ಅಧಿಕಾರಿಗಳು ಇದು ನಿಮ್ಮದೇ ಕೈ ಬರಹ ಅಂತ ಹೇಳುವ ಮೂಲಕ ಶಾಕ್ ಕೊಟ್ಟಿತ್ತು. ಇದೀಗ ಬೆಂಗಳೂರು ಪೊಲೀಸ್ರು ಅದೇ ಡೈರಿ ಕೇಸ್ ತನಿಖೆ ಮಾಡಲು ಮುಂದಾಗಿರೋದ್ರಿಂದ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನೋದಷ್ಟೆ ಈಗಿರುವ ಕುತೂಹಲ.
ಇದನ್ನೂ ಓದಿ: ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03
ಇದನ್ನೂ ಓದಿ: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!