Latest

ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03

Published

on

Share this

ಬೆಂಗಳೂರು: ಅದೊಂದು ಡೈರಿ. ಆ ಡೈರಿಯಲ್ಲಿದ್ದಿದ್ದು ಎಲ್ಲವೂ ಇನಿಷಿಯಲ್‍ಗಳು ಮಾತ್ರ. ಯಾರದ್ದೂ ಸಂಪೂರ್ಣ ಹೆಸರುಗಳೇ ಇರಲಿಲ್ಲ. ಆದರೆ ಆ ಇನಿಷಿಯಲ್‍ಗಳ ಮುಂದೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇತ್ತು.

ಆ ಸೀಕ್ರೆಟ್ ಡೈರಿಯನ್ನು ಆದಾಯ ತೆರಿಗೆ (ಐಟಿ) ಇಲಾಖೆಯವರು ರಾಜ್ಯದ ಎಂಎಲ್‍ಸಿ ಗೋವಿಂದರಾಜು ಅವರ ಮನೆ ಮೇಲೆ ದಾಳಿ ಮಾಡಿದ್ದ ವೇಳೆ ವಶಪಡಿಸಿಕೊಂಡಿದ್ದಾರೆ. ಈ ಡೈರಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು ಈ ವೇಳೆ ಈ ಡೈರಿ ಮೇಲೆ ಎ/ಕೆಜಿ/03 ಎಂದು ಬರೆದಿದ್ದಾರೆ. ಇದೇ ಡೈರಿಯೊಳಗಿನ ಪುಟಗಳಲ್ಲಿ ಈ ಎಲ್ಲಾ ವಿವರಗಳೂ ಇವೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ವರದಿ ಮಾಡಿದೆ.

ಹೈಕಮಾಂಡ್‍ಗೆ ಕಪ್ಪ ಸಲ್ಲಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಡೈರಿ ಇದೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪುಷ್ಟಿ ನೀಡುವಂತಹ ದಾಖಲೆಗಳೇ ಈ ಡೈರಿ ಎನ್ನಲಾಗಿದೆ. ಆದರೆ ಈ ಡೈರಿಯಲ್ಲಿರೋದು ನನ್ನ ಕೈಬರಹವಲ್ಲ ಎಂದು ಎಂಎಲ್‍ಸಿ ಗೋವಿಂದರಾಜು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‍ನಿಂದ ಕಪ್ಪಕಾಣಿಕೆ: ಯಾರಿಗೆ ಎಷ್ಟು ಹಣ ಸಂದಾಯವಾಗಿದೆ? ಡೈರಿಯಲ್ಲಿ ಏನಿದೆ? 

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications