ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರು 10 ಹೆಲ್ತ್ ಟಿಪ್ಸ್ ಗಹಳನ್ನು ನೀಡಿದ್ದಾರೆ.
ತಲೆ ಬರಹ ಓದಿ ಕನ್‍ಫ್ಯೂಸ್ ಆಗಬೇಡಿ. ಮೋದಿ ಸರ್ಕಾರದ ಅಯುಷ್ ಇಲಾಖೆ ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವೊಂದು ಸಲಹೆ ನೀಡಿದೆ. ಈ ಸಲಹೆ ಇರುವ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಓದಿ: ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
Advertisement
आयुष मंत्रालय ने बेहतर स्वास्थ्य और इम्यूनिटी के लिए कुछ दिशानिर्देश दिए हैं। ये ऐसे उपाय हैं, जो आसानी से किए जा सकते हैं। कई तो ऐसी बातें हैं, जो मैं वर्षों से कर रहा हूं, जैसे सालभर सिर्फ गर्म पानी पीना। आप इन्हें अपने जीवन का हिस्सा बनाएं, साथ ही दूसरों के साथ भी साझा करें। pic.twitter.com/szF2UOgNGW
— Narendra Modi (@narendramodi) April 1, 2020
Advertisement
10 ಹೆಲ್ತ್ ಟಿಪ್ಸ್
1. ದಿನವಿಡಿ ಬಿಸಿ ನೀರು ಕುಡಿಯಿರಿ.
2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು.