ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಹುಡುಗಿಯರಿಗೆ ಸೇಫ್ ಅಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಜನರ ಓಡಾಟದ ನಡುವೆಯೇ ಯುವತಿಯನ್ನು (Young Woman) ಹೊತ್ತೊಯ್ದು ದುರಳರ ಗ್ಯಾಂಗ್ ರಾತ್ರಿ ಕಾರಿನಲ್ಲಿ ಅತ್ಯಾಚಾರ (Gang Rape) ಎಸಗಿ ಮುಂಜಾನೆ ರಸ್ತೆ ನಡುವೆ ಬಿಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ ಮಾರ್ಚ್ 25 ರಂದು ಯುವತಿ ತನ್ನ ಸ್ನೇಹಿತನ ಜೊತೆ ನ್ಯಾಷಲ್ ಗೇಮ್ಸ್ ವಿಲೇಜ್ (NGV) ಕಾಂಪ್ಲೆಕ್ಸ್ ಪಾರ್ಕ್‌ನಲ್ಲಿ ಕೂತು ಮಾತನಾಡುತ್ತಿದ್ದಳು. ಆಗ ಕಾಮುಕರ ಗ್ಯಾಂಗ್ ಪಾರ್ಕ್ ಬಳಿ ಪ್ರತ್ಯಕ್ಷವಾಗಿ ಕಿರಿಕ್ ಮಾಡಿದ್ದಾರೆ. ಬಳಿಕ ಆರೋಪಿಗಳು ಯುವತಿಯನ್ನು ಹೊತ್ತೊಯ್ದು ಮಾರುತಿ 800 ಕಾರಿನಲ್ಲಿ ಸುಮಾರು 8 ಗಂಟೆಗಳ ಕಾಲ ಸುತ್ತಾಡಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಕಾಮಾಂದರ ಕ್ರೌರ್ಯಕ್ಕೆ ಕಾರಿನ ಸೀಟ್ ಕೂಡ ಚಿಂದಿ ಚಿಂದಿಯಾಗಿದೆ.
ಕೋರಮಂಗಲದ ಎನ್‌ಜಿವಿ ಕಾಂಪ್ಲೆಕ್ಸ್ ಪಾರ್ಕ್‌ನಿಂದ ಹೊರಟ ಕಾಮುಕರು ದೋಮ್ಮಲೂರು, ಇಂದಿರಾನಗರ, ಅನೇಕಲ್, ನೈಸ್ ರೋಡ್ ಹೀಗೆ 60 ಕಿ.ಮೀ ಸುತ್ತಾಡಿ, ದಾರಿ ಉದ್ದಕ್ಕೂ ಸಂತ್ರಸ್ತೆಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ. ಸತತ 8 ಗಂಟೆಗಳ ಕಾಲ ಕಾಮುಕರ ಅಟ್ಟಹಾಸಕ್ಕೆ ತುತ್ತಾಗಿರುವ ಸಂತ್ರಸ್ತೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಡ್ ರೆಸ್ಟ್‌ನಲ್ಲಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಘಟನೆಯಾಗಿ 2 ದಿನದ ಬಳಿಕ ಯುವತಿ ಸುಧಾರಿಸಿಕೊಂಡು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
2ನೇ ದಿನದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬವರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಎಲ್ಲಾ ಆರೋಪಿಗಳು ಒಂದೇ ಏರಿಯಾದವರಾಗಿದ್ದು ಪರಿಚಯಸ್ಥರಾಗಿದ್ದಾರೆ ಏನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳು ಕೋಮರಮಂಗಲ ಪೊಲೀಸರ ಕಸ್ಟಡಿಯಲ್ಲಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್