ಬೆಂಗಳೂರು: ಬೆಂಗಳೂರಿನ ಪರಿವರ್ತನಾ ಯಾತ್ರೆ ಪ್ಲ್ಯಾನ್ ಫೇಲ್ಯೂರ್ ಆಗಿದ್ದು ಯಾಕೆ? ಇದರ ಬಗ್ಗೆ ಸಮಗ್ರ ವಿವರ ನೀಡುವಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ.
ಫೇಲ್ಯೂರ್ ಗೆ ನಾಯಕರು ಕಾರಣವೇ? ಎಡವಟ್ಟು ಪ್ಲ್ಯಾನ್ ಮಾಡಿದ್ದೇ ಕಾರಣವೇ? ಎಲ್ಲಿ ತಪ್ಪಾಗಿದೆ? ಯಾರಿಂದ ತಪ್ಪಾಗಿದೆ ಎನ್ನುವ ವರದಿ ಬೇಕು. ಒಂದು ವಾರದ ಒಳಗಡೆ ಸಮಗ್ರ ವಿವರವನ್ನು ನೀಡುವಂತೆ ರಾಜ್ಯ ಉಸ್ತುವಾರಿಗಳಿಗೆ ಅಮಿತ್‍ಶಾ ತಾಕೀತು ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.
Advertisement
ಶಾ ಸೂಚನೆಯ ಬೆನ್ನಲ್ಲೇ ನವಂಬರ್ 8ಕೆ ರಾಜ್ಯ ಉಸ್ತುವಾರಿ ಹೊತ್ತಿರುವ ಪ್ರಕಾಶ್ ಜಾವಡೇಕರ್ ಬೆಂಗಳೂರಿಗೆ ಆಗಮಿಸಲಿದ್ದು, ಪರಿವರ್ತನಾ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಾದ ಎಡವಟ್ಟು ವಿಚಾರದ ಬಗ್ಗೆ ಬೆಂಗಳೂರು ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
Advertisement
ಸಭೆ ಬಳಿಕ ನವಂಬರ್ 8 ರಂದು ಜಾವಡೇಕರ್ ಸುದ್ದಿಗೋಷ್ಠಿ ನಡೆಸಲಿದ್ದು, ಈ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಾದ ಗೊಂದಲ ಕುರಿತು ಸ್ಪಷ್ಟಿಕರಣ ನೀಡುವ ಸಾಧ್ಯತೆಯಿದೆ. ಸುದ್ದಿಗೋಷ್ಠಿ ಬಳಿಕ ನವೆಂಬರ್ 9ರಂದು ಮಂಗಳೂರಿಗೆ ಜಾವಡೇಕರ್ ತೆರಳಲಿದ್ದು, ಅಲ್ಲಿ ಕೋರ್ ಕಮಿಟಿ ಸಭೆನಡೆಯಲಿದೆ.
Advertisement
ಸಭೆಯಲ್ಲಿ ಪರಿವರ್ತನಾ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಾದ ಗೊಂದಲ, ಯಾತ್ರೆಯ ಮುಂದಿನ ಕಾರ್ಯಕ್ರಮದ ರೂಪುರೇಷೆ, ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದ ಬಳಿಕ ಜಾವಡೇಕರ್ ದೆಹಲಿಗೆ ತೆರಳಿ ನವೆಂಬರ್ 10 ರಂದು ಅಮಿತ್ ಶಾಗೆ ವರದಿ ಸಲ್ಲಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಮಾಹಿತಿ ಸಿಕ್ಕಿದೆ.
Advertisement
ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಪ್ರಮಾಣದ ಕಾರ್ಯಕರ್ತರು ಬಾರದೇ ಇದ್ದಿದ್ದಕ್ಕೆ ಶಾ ರಾಜ್ಯ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು.
ಇದನ್ನೂ ಓದಿ: ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್
ರಾಷ್ಟ್ರೀಯ ಅಧ್ಯಕ್ಷರಾದ @AmitShah ರವರಿಗೆ ಹೂವಿನ ಸನ್ಮಾನ ಮಾಡಿ, ನವಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ, #ParivartanaYatre ಶುಭಾರಂಬಿಸಲಾಯಿತು.
ಈ ಸಂಧರ್ಭದಲ್ಲಿ ನೆರೆದಿದ್ದ ಜನಸ್ತೋಮ ಕರ್ನಾಟಕದಲ್ಲಿ ಬೀಸುತ್ತಿರುವ ಬದಲಾವಣೆಯ ಗಾಳಿಗೆ ಸಾಕ್ಷಿ ಎಂಬಂತ್ತಿತ್ತು. @BJP4Karnataka. pic.twitter.com/GCP4ZZCday
— B.S.Yediyurappa (@BSYBJP) November 2, 2017
ಆವರಿಸುತ್ತಿದ್ದ ಕತ್ತಲ್ಲನ್ನು ಕಡೆಗಣಿಸಿ, ಕುಣಿಗಲ್ ನಲ್ಲಿ #ParivartanaYatre ಬಂದು ಸೇರಿದ ಎಲ್ಲಾ ಸಮುದಾಯದ ಯುವಜನತೆ, ಗೃಹಣಿಯರು, ವಯಸ್ಕರರು, ಪುರುಷರನ್ನೆಲ್ಲಾ ಕಂಡು ಮಾತನಾಡಿದಾಗ ನನ್ನ ನಂಬಿಕೆ ಮತ್ತಷ್ಟು ದೃಡವಾಯಿತು.
ಜನರು ಬಯಸುತ್ತಿರುವುದು ಪೂರ್ಣ ಪ್ರಮಾಣದ ಸ್ಥಿರ ಬಿ . ಜೆ . ಪಿ. ಸರ್ಕಾರ. pic.twitter.com/ELCR3NYerk
— B.S.Yediyurappa (@BSYBJP) November 2, 2017
Glimpses from the inaugural of Karnataka Nava Nirmana #ParivartanaYatre in Bengaluru
today.Countdown for #Congress_Mukt_Karnataka has begun pic.twitter.com/0fMK77LG7D
— P Muralidhar Rao (@PMuralidharRao) November 2, 2017
A massive support to #ParivartanaYatre . Flagging off by Sh @AmitShah ji supporting Sh @BSYBJP to lead @BJP4Karnataka to a massive victory. pic.twitter.com/Ut8zMoIRpT
— Ananthkumar (@AnanthKumar_BJP) November 2, 2017
Sharing the stage with @AmitShah ji, @BSYBJP ji and #BJP leaders #NavaKarnataka #ParivarthanaYatre inaugural pic.twitter.com/ArFycFfVVv
— P C Mohan (@PCMohanMP) November 2, 2017
And we are ready for #ParivartanaYatra pic.twitter.com/qpfcLuXv0t
— BJP Karnataka (@BJP4Karnataka) November 2, 2017