ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 3 ದಿನಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇವತ್ತು ಏಕಾಏಕಿ ಜಿಗಿತ ಕಂಡು ಬಂದಿದೆ. ಇವತ್ತು 10 ಸೋಂಕಿತರ ಪೈಕಿ, 8 ಮಂದಿ ಪಾದರಾಯನಪುರದವರು. ಇಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ತಬ್ಲಿಘಿಯ ಸಂಪರ್ಕ ಹೊಂದಿದ್ದ ಲೆದರ್ ಫ್ಯಾಕ್ಟರಿಯ ಮಾಲೀಕ(ರೋಗಿ ನಂ.199)ನಿಂದ ಏಳು ಮಂದಿಗೆ ಸೋಂಕು ತಗುಲಿದೆ.
Advertisement
ಕಾರ್ಮಿಕನೊಬ್ಬನ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿದ ಬಳಿಕ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಹರಡಿರುವುದು ಗೊತ್ತಾಗಿದೆ. ಹಂಪಿನಗರದ ಸೋಂಕಿತೆಯ ಸಂಪರ್ಕದಲ್ಲಿದ್ದ ದೀಪಾಂಜಲಿ ನಗರದ 63 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಇನ್ನು ಹೊಸ ಪ್ರದೇಶ ಬಿಳೇಕಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ 64 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಮಹಿಳೆಗೆ 10 ದಿನಗಳ ಹಿಂದೆ ಜ್ವರ, ನೆಗಡಿ ಬಂದಿತ್ತು. ಆಸ್ಪತ್ರೆ ಹೋಗಿ ತೋರಿಸಿದಾಗ ಕೊರೊನಾ ಬಂದಿರುವುದು ಗೊತ್ತಾಗಿದೆ.
Advertisement
ಪಾದರಾಯನಪುರಕ್ಕೆ ‘ಫ್ಯಾಕ್ಟರಿ’ ಕಂಟಕ
* ಲಾಕ್‍ಡೌನ್ ನಡುವೆಯೂ ಪಾದರಾಯನಪುರದ ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ
* ಲಾಕ್‍ಡೌನ್ ಉಲ್ಲಂಘಿಸಿ ಕೆಲಸ ಮಾಡಿದ್ದಕ್ಕೆ ಕೋರೊನಾ ಶಿಕ್ಷೆ..!
* ಲೆದರ್ ಫ್ಯಾಕ್ಟರಿ ಸಂಪರ್ಕಿದಲ್ಲಿದ್ದ 8 ಜನರಲ್ಲಿ ಕೊರೊನಾ ಪತ್ತೆ
* ಫ್ಯಾಕ್ಟರಿ (ರೋಗಿ ನಂ.199) ಮಾಲೀಕನಿಂದ ಕಾರ್ಮಿಕನಿಗೆ ಸೋಂಕು
* ಕಾರ್ಮಿಕ (ರೋಗಿ ನಂ.292)ನಿಂದ ಅವರ ಕುಟುಂಬಕ್ಕೆ ವೈರಸ್
(ರೋಗಿ ನಂ.555,558,559 ,560,561 ,562 ,563)
* ಮಾಲೀಕನ ಲಾಭದಾಸೆಗೆ 4 ವರ್ಷದ ಪುಟಾಣಿಗೂ ಕೊರೊನಾ ಸೋಂಕು (ರೋಗಿ ನಂ.561)
Advertisement
Advertisement
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿತ್ತು. ಆದರೆ ಇವತ್ತು 30 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ 14, ಬೆಂಗಳೂರಿನಲ್ಲಿ 10, ವಿಜಯಪುರದಲ್ಲಿ 2, ದಕ್ಷಿಣ ಕನ್ನಡ, ದಾವಣಗೆರೆ, ಕಲಬುರಗಿ, ತುಮಕೂರು ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿದೆ.