ಬೆಂಗಳೂರು: ಕೊರೊನಾ ವೈರಸ್ ಫೋಬಿಯಾ ಅನ್‍ಲೈನ್‍ಗೂ ಹೊಕ್ಕಿದೆ. ಕೊರೊನಾ ವೈರಸ್ ಓವರ್ ಡೋಸ್‍ಗೆ ಜನ ತಲೆಕೆಡಿಸಿಕೊಂಡಿದ್ದಾರೆ. ವೈರಸ್‍ನಿಂದ ಪಾರಾಗೋದು ಹೇಗೆ ಅನ್ನೋ ಪ್ರಯತ್ನದಲ್ಲಿ ಇರೋವಾಗ್ಲೇ ಡೆಂಜರಸ್ ಕೊರೊನಾ ಅನ್‍ಲೈನ್‍ಗೂ ಆವರಿಸಿ ಜನರಲ್ಲಿ ಮತ್ತಷ್ಟು ಭೀತಿಯನ್ನ ಹುಟ್ಟಿಸಿದೆ.
Advertisement
ಕೊರೊನಾ ವೈರಸ್ ಇಡೀ ವಿಶ್ವವನ್ನೇ ಭೀತಿಯಲ್ಲಿ ಮುಳುಗಿಸಿದೆ. ಚೀನಾದಲ್ಲಿ ಜನ್ಮತಳೆದು ದೇಶ-ದೇಶಗಳನ್ನ ಆವರಿಸುತ್ತಿರುವ ಕೊರೊನಾ ವೈರಸ್ ತಡೆಗೆ ಜನ ತಲೆಕೆಡಿಸಿಕೊಂಡಿದ್ದಾರೆ. ಯಾವಾಗ ಮಾಸ್ಕ್, ಕೊರೊನಾ ವೈರಸ್ ತಡೆಯಬಹುದು ಅನ್ನೊದು ಗೊತ್ತಾಯ್ತೋ ಜನ ಮಾಸ್ಕ್ ಹಿಂದೆ ಬಿದ್ರು. ಆದರೆ ಡಿಮ್ಯಾಂಡ್‍ನಿಂದಾಗಿ ಮಾಸ್ಕ್ ಎಲ್ಲೂ ಸಿಗದಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡವರು ಲಾಭ ಮಾಡೋ ಮಾಸ್ಕ್ ದಂಧೆಗಿಳಿದಿದ್ದಾರೆ.
Advertisement
Advertisement
ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಅದರಲ್ಲೂ ರಾಜ್ಯದಲ್ಲಿ ಇದೀಗ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿದ್ದಲ್ಲದೇ ಎಲ್ಲಿಯೂ ಸಿಗದ ಪರಿಸ್ಥಿತಿ ಶುರುವಾಗಿದೆ. ಇದರಿಂದ ಜನ ಅನ್‍ಲೈನ್‍ನಲ್ಲಿ ಮಾಸ್ಕ್ ಖರೀದಿಗೆ ಮುಂದಾಗಿದ್ದಾರೆ. ಆದರೆ ಅಲ್ಲಿಯೂ ಮಾಸ್ಕ್ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ಖರೀದಿ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಒಟ್ಟಾರೆ ಕೊರೊನಾ ದಾಳಿಯನ್ನ ಎದುರಿಸಲು ಜನ ಸರ್ಕಸ್ ಮಾಡುವಂತಾಗಿದೆ. ಹೇಗಾದರೂ ಮಾಡಿ ಆ ಡೆಂಜರಸ್ ವೈರಸ್ ನಿಂದ ಬಚಾವ್ ಆದರೆ ಸಾಕು ಎಂದು ಮಾಸ್ಕ್, ಸ್ಯಾನಿಟೈಸರ್ ಖರೀದಿ ಜನ ಮುಂದಾಗಿದ್ರೂ ಅದರ ಲಭ್ಯತೆ ಇಲ್ಲದಂತಾಗಿದೆ.