ಕೈಯಲಿದ್ದ ವೃದ್ಧ ದಂಪತಿಯ ಮೊಬೈಲ್ ಕ್ಷಣಾರ್ಧದಲ್ಲಿ ಮಾಯ

Public TV
1 Min Read
collage phone

ಬೆಂಗಳೂರು: ಸಿಲಿಕಾನ್‍ನಲ್ಲಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೇಬಲ್ಲಿ ಇದ್ದರೂ ಎಗರಿಸುತ್ತಾರೆ. ಕೈಯಲ್ಲಿ ಇದ್ದರೂ ಕಿತ್ಕೊಂಡು ಹೋಗುತ್ತಾರೆ. ಆದರೆ ಈಗ ಮಾತನಾಡಿಕೊಂಡು ಹೋಗುವಾಗ ಮೊಬೈಲ್ ಕಿತ್ಕೊಂಡು ಹೋಗಿದ್ದಾರೆ.

ಹೌದು ಬೆಂಗಳೂರಿನ ವಿವೇಕನಗರದಲ್ಲಿ ವೃದ್ಧ ದಂಪತಿ ಫೋನ್ ಅಲ್ಲಿ ಮಾತನಾಡಿಕೊಂಡು ಹೋಗುವಾಗ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದಿದ್ದಾರೆ. ಸುತ್ತ ಮುತ್ತ ಖಾಲಿ ಇರೋದನ್ನು ನೋಡಿದ ದುಷ್ಕರ್ಮಿಗಳು ಕಣ್ಣು ಮುಚ್ಚಿ ಬಿಡೋ ಹೊತ್ತಿಗೆ ಮೊಬೈಲ್ ಕಿತ್ಕೊಂಡು ಪರಾರಿಯಾಗಿದ್ದಾರೆ.

phone

ವಿವೇಕ್ ನಗರ ಒಂದರಲ್ಲೇ ಈ ರೀತಿ ಸಾಕಷ್ಟು ಪ್ರಕರಣಗಳು ನಡೆದಿವೆ. ಸಾಕಷ್ಟು ದಿನದಿಂದಲೂ ಇದೇ ರೀತಿ ಮೊಬೈಲ್ ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಮೊಬೈಲ್ ಕದ್ದುಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಬಂಧ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article