Connect with us

Bengaluru City

ಸ್ವರ್ಗ ಎನ್ನುತ್ತಾ ಇದ್ದವಳಿಗೆ ಅಲ್ಲಿ ಆಗಿತ್ತು ‘ನಿತ್ಯ’ ನರಕ ದರ್ಶನ!

Published

on

– ಅನುಭವವನ್ನು ಬಿಚ್ಚಿಟ್ಟ ಬಾಲಕಿ

ಬೆಂಗಳೂರು: ವಿವಾದಿತ ಸ್ವಾಮೀಜಿ ನಿತ್ಯಾನಂದನ ಲೀಲೆಗಳು ದಿನ ಕಳೆದಂತೆ ಹೊರಗೆ ಬರುತ್ತಿವೆ. ಗುಜರಾತ್‍ನ ಆಶ್ರಮದಲ್ಲಿ ಹಾಗೇ ಆಗ್ತಿತ್ತು, ಹೀಗೆ ಆಗ್ತಿತ್ತು ಎನ್ನಲಾಗಿತ್ತು. ಆದರೆ ಅದನ್ನ ಯಾರು ನೇರವಾಗಿ ಹೇಳಿಕೊಂಡಿರಲಿಲ್ಲ. ಈಗ ಆಶ್ರಮದಿಂದ ಹೊರಗೆ ಬಂದಿರೋ ಬಾಲಕಿಯೊಬ್ಬಳು ನಿತ್ಯಾನಂದನ ಆಶ್ರಮದಲ್ಲಿ ಯಾವ ರೀತಿ ನರಕ ದರ್ಶನವಾಗಿತ್ತು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ನಿತ್ಯಾನಂದನ ಆಶ್ರಮದಲ್ಲಿ ಕೆಲವೊಂದು ನಿಯಮಗಳನ್ನು ಹಾಕಲಾಗಿತ್ತು ಆ ನಿಯಮಗಳನ್ನು ಯಾರೂ ಮಿರುವ ಹಾಗೇ ಇರಲಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕತ್ತಲ ಕೂಪದ ದರ್ಶನ ಆಗುತ್ತಿತ್ತಂತೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

ನಿತ್ಯಾನಂದನ ಆಶ್ರಮದಲ್ಲಿ ಬಾಲಕಿ ಅನುಭವಿಸಿದ್ದ ಕಷ್ಟಗಳೇನು?: ನಾನು ಕೂಡ 2013ರಿಂದ ಈ ಆಶ್ರಮದಲ್ಲಿ ಇದ್ದೀನಿ. 7 ವರ್ಷ ಆಶ್ರಮದಲ್ಲಿ ವಾಸ ಮಾಡುತ್ತಾ ಇದ್ದೆ. ನಾನು ಸಹ ಅನೇಕರಿಗೆ ಗುರುಕುಲ ಸೇರುವಂತೆ ಸಲಹೆ ನೀಡಿದ್ದೀನಿ. ಆಶ್ರಮವನ್ನು ಸ್ವರ್ಗ ಅಂತಲೇ ಭಾವಿಸಿದ್ದೆ. ನನಗೂ 7 ವರ್ಷಗಳ ಕಾಲ ಏನೂ ಗೊತ್ತಾಗಲೇ ಇಲ್ಲ. 2019ರಲ್ಲಿ ಸಡನ್ ಆಗಿ ಎಲ್ಲವೂ ಬದಲಾಗುತ್ತಾ ಬಂದಿತ್ತು. ನಾನು ಒಮ್ಮೆ ಇವರ ಮಾತನ್ನು ಕೇಳದೇ ಇದ್ದಾಗ 2 ತಿಂಗಳುಗಳ ಕಾಲ ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟಿದ್ದರು. ಸ್ವಾಮೀಜಿಗೆ ಬೇಕಾಗಿದ್ದು ಕೇವಲ ಹಣ ಮಾತ್ರ. ಹಣವನ್ನು ಸಂಪಾದನೆ ಮಾಡಲು ಪೋೀಸ್ಟರ್‍ಗಳನ್ನು ನೀಡುತ್ತಾ ಇದ್ದರು. ಹಿಂದೂಯಿಸಂ ಹೆಸರಿನಲ್ಲಿ ಮಧ್ಯರಾತ್ರಿಯೂ ಹೋಗಿ ಹಣ ವಸೂಲಿ ಮಾಡುತ್ತಾ ಇದ್ದೆವು. ಲಕ್ಷ ಲಕ್ಷ ಹಣವನ್ನು ನಾವು ಪಡೆದುಕೊಂಡಿದ್ದೀವಿ. ಇಷ್ಟೆಲ್ಲ ಆದರೂ ನಮಗೆ ಊಟವನ್ನು ಸರಿಯಾಗಿ ಕೊಡುತ್ತಾ ಇರಲಿಲ್ಲ. ಊಟದಲ್ಲಿ ಉಪ್ಪು ಖಾರ ಅನ್ನೋದು ಇರಲಿ, ತರಕಾರಿ ಕೂಡ ಇರುತ್ತಿರಲಿಲ್ಲ. ತರಕಾರಿಯೇ ಇಲ್ಲದ ಊಟವನ್ನು ನಾವು ಮಾಡಿದ್ದೀವಿ. ನಿತ್ಯಾನಂದನಿಗೆ ಬೇಕಾಗಿದ್ದು ಗೋಲ್ಡನ್ ಟೆಂಪಲ್ ಅನ್ನು ನಿರ್ಮಾಣ ಮಾಡೋದು ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸಿನಿಯರ ಮೇಲೆ ಅತ್ಯಾಚಾರ ಆಗಿದೆ. ಎಲ್ಲಾ ಸನ್ಯಾಸಿನಿಯರ ಮೇಲೆ ಆಗಿದೆ ಅಂತ ಹೇಳೋದಿಲ್ಲ. ಆದರೆ ಬಹುತೇಕರ ಮೇಲೆ ಆಗಿದೆ. ಕೆಲವೊಂದು ಪ್ರಕರಣದಲ್ಲಿ ನಾವು ಸಾಕ್ಷ್ಯ ಆಗಿದ್ದೀವಿ. ವಿದೇಶದಿಂದ ಕೆಲವು ಮಂದಿ ಬರುತ್ತಾ ಇದ್ದರು. ಅವರಿಗೆ ಕೆಲವೊಂದು ಸ್ಕ್ರಿಪ್ಟ್‍ಗಳನ್ನು ನೀಡಿ ಆಕ್ಟ್ ಮಾಡುವಂತೆ ಹೇಳುತ್ತಾ ಇದ್ದರು. ಅದು ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಸುವ ನಾಟಕವಾಗಿತ್ತು. ಪೊಲೀಸ್ ಸ್ಟೇಷನ್‍ಗೆ ಹೋಗ್ತೀವಿ ಅಂತೆಲ್ಲಾ ಹೇಳಬೇಕಿತ್ತು. ಇದನ್ನು ರಹಸ್ಯವಾಗಿ ಚಿತ್ರಿಸಿಕೊಳ್ತಾ ಇದ್ರು ಅಂತ ಅನಿಸುತ್ತೆ. ನಾನು ಒಮ್ಮೆ ಲೈಂಗಿಕ ದೌರ್ಜನ್ಯವಾಗಿದೆ ಅಂತ ಹೇಳಿದ್ದೀನಿ. ಇದು ನಿತ್ಯನ ಆಶ್ರಮದಲ್ಲಿ ನಡೆಯುತ್ತಾ ಇದ್ದ ಘಟನೆಯಾಗಿದೆ ಎಂದು ಬಾಲಕಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ:ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

Click to comment

Leave a Reply

Your email address will not be published. Required fields are marked *