ಬೆಂಗಳೂರು: ದಯವಿಟ್ಟು ಒಂದು ಹೊತ್ತಿನ ಊಟನ ನಮಗೆ ನೀಡಿ ಎಂದು ಪಬ್ಲಿಕ್ ಟಿವಿ ಮುಂದೆ ಕಣ್ಣೀರು ಹಾಕಿದ್ದ ಮಂಗಳಮುಖಿಯರಿಗೆ ಇದೀಗ ನವ ನಿರ್ಮಾಣ ಸೇನೆ ಸಹಾಯ ಹಸ್ತ ಚಾಚಿದೆ.
ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದ ಚಾಲೆಂಜ್ ಸ್ವೀಕರಿಸಿದ ನವ ನಿರ್ಮಾಣ ಸೇನೆ, ಊಟವಿಲ್ಲದೆ ಹಸಿವಿನಿಂದ ನರಳಾಡುತ್ತಿದ್ದ ನಗರದ ಮಂಗಳಮುಖಿಯರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನ ನೀಡಿ ಮಾನವೀಯತೆ ಮೆರೆದಿದೆ.
ಲಾಕ್ ಡೌನ್ ಹಿನ್ನೆಲೆ ಕೆಲಸ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಮಂಗಳಮುಖಿಯರು ಊಟವಿಲ್ಲದೇ ಕಣ್ಣೀರು ಹಾಕಿದ್ರು. ಮಂಗಳಮುಖಿಯರ ಕಣ್ಣೀರ ಕಥೆಯನ್ನ ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ವರದಿಯನ್ನ ನೋಡಿದ ಸೇನೆ ಮಂಗಳಮುಖಿಯರ ನೆರವಿಗೆ ಬಂದಿದೆ.
ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಎಸ್ ಯತಿರಾಜ್ ನಾಯ್ಡು ಹಾಗೂ ಅವರ ತಂಡ ಪೀಣ್ಯದ 8ನೇ ಮೈಲಿ ನಲ್ಲಿರುವ ಮಂಗಳಮುಖಿಯರ ಮನೆಗೆ ಹೋಗಿ ದಿನಸಿಯನ್ನ ತಲುಪಿಸಿದ್ದಾರೆ. ಅಗತ್ಯ ವಸ್ತುಗಳನ್ನ ಪಡೆದ ಮಂಗಳಮುಖಿಯರು ಪಬ್ಲಿಕ್ ಟಿವಿಗೆ ಕೈ ಮುಗಿದು ಧನ್ಯವಾದವನ್ನು ತಿಳಿಸಿದ್ದಾರೆ.