ಬೆಂಗಳೂರು: ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಮಧ್ಯರಾತ್ರಿ 2 ಗಂಟೆಯವರೆಗೆ ರೈಲುಗಳ ಅವಧಿಯನ್ನು ವಿಸ್ತರಿಸಿ ಗಿಫ್ಟ್ ನೀಡಿತ್ತು. ಬಿ.ಎಂ.ಆರ್.ಸಿ.ಎಲ್ ನ ಈ ಮೆಟ್ರೋ ಸೇವೆಯ ಲಾಭವನ್ನು ಪ್ರಯಾಣಿಕರು ಭರ್ಜರಿಯಾಗಿಯೇ ಪಡೆದುಕೊಂಡಿದ್ದಾರೆ.
ಒಂದೇ ದಿನಕ್ಕೆ ಅಂದರೆ ಡಿಸೆಂಬರ್ 31 ರಂದು ವಿಸ್ತರಿಸಿದ ಅವಧಿಯ ಆದಾಯ ಸೇರಿ ಒಟ್ಟು 1 ಕೋಟಿ 25 ಲಕ್ಷ ಹಣ ಹರಿದು ಬಂದಿದ್ದರೆ, 4 ಲಕ್ಷದ 53 ಸಾವಿರದ 865 ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ.
Advertisement
Advertisement
ವಿಸ್ತರಿಸಿದ ಅವಧಿಯೊಂದರಲ್ಲೇ ಅಂದರೆ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ 2 ಗಂಟೆ ನಡುವೆ 32 ಸಾವಿರದ 393 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಮೂಲಕ 9 ಲಕ್ಷದ 25 ಸಾವಿರದ 174 ರೂಪಾಯಿ ಆದಾಯವಾಗಿದೆಯೆಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ.