ಬೆಂಗಳೂರು: ಮೈಸೂರು-ಬೆಂಗಳೂರು ರೈಲು ಪ್ರಯಾಣ ಸೇಫ್ ಇಲ್ಲ. ಯಾಕೆಂದರೆ ಕೇವಲ ಒಂದು ವಾರದ ಅಂತರದಲ್ಲಿ 2 ಬಾರಿ ದರೋಡೆಯಾಗಿದೆ.
ಚನ್ನಪಟ್ಟಣ – ಕೆಂಗೇರಿ ಮಾರ್ಗದ ನಡುವೆ ರೈಲಿನಲ್ಲಿ ಸುಲಿಗೆ ಮಾಡುತ್ತಿದ್ದು, ಪಯಾಣಿಕರ ಮೇಲೆ ಹಲ್ಲೆ ಮಾಡಿ ಸಿಕ್ಕಿದ್ದನ್ನು ದೋಚುತ್ತಿದ್ದಾರೆ. ಮೊಬೈಲ್, ನಗದು, ಚಿನ್ನ ಹೀಗೆ ಏನೇ ಸಿಕ್ಕಿದರೂ ಬಿಡದೆ ದೋಚಿ ಬಳಿಕ ಟ್ರೈನ್ ಚೈನ್ ಎಳೆದು ಮಾರ್ಗ ಮಧ್ಯೆಯೇ ಜಿಗಿದು ಪರಾರಿಯಾಗಿತ್ತಿದ್ದಾರೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
Advertisement
Advertisement
ದರೋಡೆ-1
ರೈಲು ಚನ್ನಪಟ್ಟಣ-ರಾಮನಗರ ನಡುವೆ ಇರುವಾಗ ಜನನಿಬಿಡ ಜನರಲ್ ಕಂಪಾರ್ಟ್ ಮೆಂಟ್‍ನಲ್ಲೇ ದರೋಡೆ ಮಾಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಂದ ಲೂಟಿ ಮಾಡಿದ್ದು, ಪ್ರಯಾಣಿಕರು ಬಾಗಿಲ ಬಳಿ ನಿಂತಿದ್ದ ವೇಳೆ ನಾಲ್ಕೈದು ಮಂದಿ ದರೋಡೆಕೋರರು ಅಟ್ಯಾಕ್ ಮಾಡಿದ್ದಾರೆ. ಬಳಿಕ ರೈಲಿನ ಬಾಗಿಲ ಬಳಿ ನಿಂತಿದ್ದವರನ್ನ ಟಾಯ್ಲೆಟ್‍ಗೆ ಎಳೆದುಕೊಂಡು ಹೋಗಿದ್ದಾರೆ.
Advertisement
ಪ್ರಯಾಣಿಕರನ್ನು ಕೋಲಾರದ ಕೃಷಿಕ ನಾಗರಾಜು ಮತ್ತು ಹೆಚ್‍ಡಿ ಕೋಟೆಯ ರಾಮೇಗೌಡ ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ನಗ-ನಗದು, ಮೊಬೈಲ್ ಲೂಟಿ ಮಾಡಿದ್ದಾರೆ. ಬಳಿಕ ರೈಲಿನ ಚೈನ್ ಎಳೆದು ನಿಧಾನವಾಗುತ್ತಿದ್ದಂತೆ ಕೆಳಗಿ ಧುಮುಕಿ ಕತ್ತಲಲ್ಲಿ ಕಣ್ಮರೆಯಾಗಿದ್ದಾರೆ.
Advertisement
ದರೋಡೆ 2
ಡಿಸೆಂಬರ್ 20 ರಂದು ರಾತ್ರಿ ಸುಮಾರು 10 ಗಂಟೆಯಲ್ಲಿ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ ಮಾಡಿದ್ದಾರೆ. ರೈಲು ಹೆಜ್ಜಾಲ-ನಾಯಂಡಹಳ್ಳಿ ನಡುವೆ ದರೋಡೆ ಮಾಡಿದ್ದು, ಎಸ್2-ಎಸ್3 ಬೋಗಿಯಲ್ಲಿ ನಾಲ್ವರು ದರೋಡೆಕೋರರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಲೂಟಿ ಮಾಡಿದ್ದಾರೆ.
ಹೀಗಾಗಿ ಈ ಮಾರ್ಗದಲ್ಲಿ ರೈಲು ಪ್ರಯಾಣಿಕರು ಪ್ರತಿದಿನ ಆತಂಕ, ಭಯದಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈ ಮಾರ್ಗದ ರೈಲುಗಳಿಗೆ ಹೆಚ್ಚಿನ ಭದ್ರತೆ ಸೌಲಭ್ಯವನ್ನು ಒದಗಿಸಬೇಕಿದೆ ಎಂದು ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv