ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯನ್ನು (Bengaluru-Mysuru Expressway) ಬಳಸುವ ಕಾರುಗಳಿಗೆ ಟೋಲ್ ದರ ಹೆಚ್ಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಟ್ರಕ್, ಬಸ್ಗಳ ಒಂದೇ ಪ್ರಯಾಣಕ್ಕೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರೂ-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳಿಗೆ ಟೋಲ್ ದರದಲ್ಲಿ 10 ರೂ. ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದು ಅನ್ವಯವಾಗಲಿದೆ. ಇದನ್ನೂ ಓದಿ: KSRTC ನೌಕರರಿಗೆ ಗುಡ್ನ್ಯೂಸ್ – ಡಬಲ್ ಡ್ಯೂಟಿಯಿಂದ ಮುಕ್ತಿ
Advertisement
Advertisement
ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾದ ಟೋಲ್ ಶುಲ್ಕ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾ
1.ನಾಲ್ಕು ಚಕ್ರವಾಹನ
ಏಕಮುಖ ಪ್ರಯಾಣ – 170 ರೂ.
ದ್ವಿಮುಖ ಪ್ರಯಾಣ – 255 ರೂ.
ತಿಂಗಳ ಪಾಸ್ – 5,715
ಲೋಕಲ್ ತಿಂಗಳ ಪಾಸ್ – 340
Advertisement
2.ಎಲ್ಸಿವಿ, ಎಲ್ಜಿವಿ/ಮಿನಿಬಸ್
ಏಕಮುಖ ಪ್ರಯಾಣ – 275 ರೂ.
ದ್ವಿಮುಖ ಪ್ರಯಾಣ – 415 ರೂ.
ತಿಂಗಳ ಪಾಸ್ – 9,230 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
3.ಟ್ರಕ್, ಬಸ್ 2 ಎಕ್ಸೆಲ್
ಏಕಮುಖ ಪ್ರಯಾಣ – 580 ರೂ.
ದ್ವಿಮುಖ ಪ್ರಯಾಣ – 870 ರೂ.
ತಿಂಗಳ ಪಾಸ್ – 19,345 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
4. 3 ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 635 ರೂ.
ದ್ವಿಮುಖ ಪ್ರಯಾಣ – 950 ರೂ.
ತಿಂಗಳ ಪಾಸ್ – 21,100 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
5. ಮಲ್ಟಿ ಎಕ್ಸೆಲ್ ವೆಹಿಕಲ್, ಹೆವಿ ಕನ್ಸಟ್ರಕ್ಷನ್, ಮಿಷನರಿ ಮೂವಿಂಗ್ ವೆಹಿಕಲ್
ಏಕಮುಖ ಪ್ರಯಾಣ – 910 ರೂ.
ದ್ವಿಮುಖ ಪ್ರಯಾಣ – 1,365 ರೂ.
ತಿಂಗಳ ಪಾಸ್ – 30,335 ರೂ.
6. ಓವರ್ ಸೈಜ್ ವೆಹಿಕಲ್ 7 ಕ್ಕಿಂತ ಹೆಚ್ಚು ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 1,110 ರೂ.
ದ್ವಿಮುಖ ಪ್ರಯಾಣ – 1,660 ರೂ.
ತಿಂಗಳ ಪಾಸ್ – 36,930 ರೂ.