ಮಂಡ್ಯ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Expressway) ನಾಲ್ಕು ದಿನಗಳ ಹಿಂದಷ್ಟೆ ಅಳವಡಿಸಲಾಗಿದ್ದ ಸ್ಪೀಡ್ ಡಿಟೆಕ್ಟರ್‌ಗಳು ಇಂದು ಕೈಕೊಟ್ಟಿವೆ.
ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಸ್ಪೀಡ್ ಲಿಮಿಟ್ ಜಾರಿ ಮಾಡಲಾಗಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಮಂಡ್ಯದ (Mandya) ಉಮ್ಮಡಹಳ್ಳಿ ಗೇಟ್ ಬಳಿ ಸೋಲರ್‍ನಿಂದ ಕಾರ್ಯ ನಿರ್ವಹಿಸುವ ಸ್ಪೀಡ್ ಡಿಟೆಕ್ಟರ್ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಈ ಕ್ಯಾಮೆರಾಗಳು ನಾಲ್ಕೇ ದಿನಕ್ಕೆ ಹಾಳಾಗಿವೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ
Advertisement
ಜುಲೈ 29 ರಿಂದ ಎಐ ಕ್ಯಾಮೆರಾಗಳ ಜೊತೆ ಸ್ಪೀಡ್ ಡಿಟೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಡಿಟೆಕ್ಟರ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಯೋಜನೆಗೆ ಲಕ್ಷಾಂತರ ರೂ.ಗಳನ್ನು ವಿನಿಯೋಗಿಸಲಾಗಿದೆ.
Advertisement
Advertisement
ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (AlokKumar) ಆದೇಶದ ಮೇರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸ್ವಯಂಚಾಲಿತ (Artificial Intelligence) ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿತ್ತು. ವೇಗದ ಮಿತಿ ಮೀರಿದರೆ ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುವಂತೆ ತಂತ್ರಜ್ಞಾನ ರೂಪಿಸಲಾಗಿತ್ತು.
Advertisement
ಈ ಸಂಬಂಧ ಟ್ವೀಟ್ ಮಾಡಿದ್ದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯವಾಗಲಿದೆ. ಅಲ್ಲದೇ ಭಾರತದ ರಸ್ತೆಯಲ್ಲಿ ಅತಿವೇಗವೇ ಪ್ರಮುಖ ಕೊಲೆಗಾರ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗಮಿತಿ ಹೆಚ್ಚಾಗುತ್ತಾ?
Web Stories