ಬೆಂಗಳೂರು: ದಶಪಥ ರಸ್ತೆಯಲ್ಲಿ (Bengaluru Mysuru Expressway) ಸ್ಥಳೀಯರು ಓಡಾಡೋಕೆ ಸರ್ವೀಸ್ ರಸ್ತೆ ಇರಬೇಕು. ಆದ್ರೆ ಅಲ್ಲಿ ಸರ್ವೀಸ್ ರಸ್ತೆಯೇ ಇಲ್ಲ. ನಾನೇ ಆ ರಸ್ತೆಯಲ್ಲಿ ಬರೋವಾಗ ಶೌಚಾಲಯಕ್ಕೆ ಹೋಗ್ಬೇಕು ಅಂದ್ರೆ, ಅವಕಾಶ ಇರ್ಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಡಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಉದ್ಘಾಟನೆಯೇ ಸರಿಯಿಲ್ಲ. ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಯಮದ ಅನ್ವಯ ಮಾಡಿಲ್ಲ. ರಸ್ತೆ ಗುತ್ತಿಗೆದಾರನೂ ಸರಿಯಾಗಿ ಕೆಲಸ ಮಾಡಿಲ್ಲ. ಈಗಾಗಲೇ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎಲ್ಲ ಕಡೆ ಅಂಗಡಿಗಳು ಮುಚ್ಚಿಹೋಗಿವೆ. ಸ್ಥಳೀಯರು ಓಡಾಡೋಕೆ ಸರ್ವೀಸ್ ರಸ್ತೆಯೇ ಇಲ್ಲ. ನಾನೇ ಮೊನ್ನೆ ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲು ಅವಕಾಶ ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು
Advertisement
Advertisement
ಸಚಿವ ವಿ. ಸೋಮಣ್ಣ (V Somanna) ಮತ್ತು ಡಿ.ಕೆ ಶಿವಕುಮಾರ್ ವಿಮಾನದಲ್ಲಿ ಒಟ್ಟಿಗೆ ಕುಳಿತಿದ್ದ ಫೋಟೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹಳಷ್ಟು ವಿಚಾರದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸೋಮಣ್ಣ ನಮ್ಮ ತಾಲೂಕಿನವರು. ನಾವು ಅವರಿಗೆ ಗೌರವ ಕೊಡ್ತೀವಿ. ರಾಜಕಾರಣ ಬೇರೆ, ಬಾಂಧವ್ಯ ಬೇರೆ. ಅವರು ಕಾಂಗ್ರೆಸ್‌ಗೆ ಬರ್ತೀನಿ ಅಂತಾ ಹೇಳಿಲ್ಲ, ನಾನೂ ಕರೆದಿಲ್ಲ. ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ವಿಮಾನದಲ್ಲಿ ಬರ್ತಾ ಇದ್ವಿ ಅಷ್ಟೇ. ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!