ಲಕ್ನೋ: ಇತ್ತೀಚೆಗೆ ಚಿತ್ರ-ವಿಚಿತ್ರ ರೀತಿಯಲ್ಲಿ ಮದುವೆ (Krishna Marriage) ಗಳು ನಡೆಯುತ್ತವೆ. ಅಂತೆಯೇ ಯುವತಿಯೊಬ್ಬಳು ಭಗವಾನ್ ಶ್ರೀಕೃಷ್ಣನನ್ನು ಮದುವೆಯಾದ ವಿಚಿತ್ರ ಪ್ರಸಂಗವೊಂದು ನಡೆದಿದೆ.
ಈ ಘಟನೆ ಉತ್ತರಪ್ರದೇಶದ ಔರ್ರೈಯಾ ಜಿಲ್ಲೆಯಲ್ಲಿ ನಡೆದಿದೆ. ರಕ್ಷಾ, ಕೃಷ್ಣನನ್ನು ಮದುವೆಯಾದ ವಿದ್ಯಾರ್ಥಿನಿ. ಈಕೆ ಪ್ರತಿನಿತ್ಯ ಕೃಷ್ಣನ್ನು ಪೂಜಿಸುತ್ತಿದ್ದಳು. ಕಾನೂನು ಪದವಿ ಓದಿರುವ ಈಕೆಗೆ ಕೃಷ್ಣನ ಮೇಲೆ ಭಕ್ತಿ ಹೆಚ್ಚಾಗಿ, ಕೃಷ್ಣ ಯಾವತ್ತೂ ನನ್ನ ಜೊತೆಗೇ ಇರಬೇಕು ಅನ್ನೋ ಉದ್ದೇಶದಿಂದ ಆತನನ್ನೇ ವರಿಸಿದ್ದಾಳೆ.
ರಕ್ಷಾ ಮೊದಲು ತನ್ನ ನಿರ್ಧಾರವನ್ನು ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಅಂತೆಯೇ ಮಗಳ ತೀರ್ಮಾನಕ್ಕೆ ತಂದೆಯೂ ಸೈ ಎಂದರು. ಅಲ್ಲದೆ ಆಕೆಯ ಮದುವೆಗೆ ತಯಾರಿ ನಡೆಸಲು ಆರಂಭಿಸಿದರು. ಈ ಅದ್ಧೂರಿ ಮದುವೆಯಲ್ಲಿ ರಕ್ಷಾ ಕುಟುಂಬಸ್ಥರು, ಆಪ್ತರು ಪಾಲ್ಗೊಂಡು ಆಶೀರ್ವದಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ
ರಕ್ಷಾ ಕೃಷ್ಣನ ಮೂರ್ತಿಯನ್ನು ತಲೆಯಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡಿದಳು. ಈ ವೇಳೆ ಕುಟುಂಬಸ್ಥರು ಆರತಿ ಬೆಳಗಿದ್ದಾರೆ. ಇದೇ ವೇಳೆ ಕೃಷ್ಣನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಕುಟುಂಬಸ್ಥರು ಇಮ್ಮಡಿಗೊಳಿಸಿದರು. ಇತ್ತ ವಧು, ಕೃಷ್ಣ ಮೂರ್ತಿಯೊಂದಿಗೆ ಮೊದಲು ತನ್ನ ಸಂಬಂಧಿಕರ ಮನೆಗೆ ಹೋಗಿ ನಂತರ ತನ್ನ ಅಲ್ಲಿಂದ ತನ್ನ ತವರಿಗೆ ಬಂದಿದ್ದಾಳೆ.
ಸದ್ಯ ಈ ವಿಭಿನ್ನ ಮದುವೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ.