Bengaluru Mysuru Expressway ಮಳೆಯ ಅವಾಂತರಕ್ಕೆ ಇದೇ ಕಾರಣ – ಕೇಂದ್ರ ಸಚಿವಾಲಯ ಸ್ಪಷ್ಟೀಕರಣ

Public TV
2 Min Read
Bengaluru Mysuru Expressway 10

ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway) ನಲ್ಲಿ ಮಳೆ ಅವಾಂತರ ಸೃಷ್ಠಿಯಾಗಿದ್ದು, ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾನುವಾರ ಸ್ಪಷ್ಟೀಕರಣ ನೀಡಿದೆ. `ರಾಮನಗರ ಸಮೀಪದ ಗ್ರಾಮಸ್ಥರು ಚರಂಡಿಯ ಮಾರ್ಗವನ್ನು ತಡೆಹಿಡಿದಿದ್ದರು. ಆದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುವಂತಾಗಿತ್ತು’ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಮನಗರದ (Ramanagara) ಬಳಿಯಿರುವ ಮಾದಾಪುರ ಗ್ರಾಮಸ್ಥರು ಹಾಗೂ ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಅಡ್ಡದಾರಿ ನಿರ್ಮಿಸಿಕೊಂಡು, ಆ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ 3 ಮೀಟರ್ ಅಗಲಕ್ಕೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಿದ್ದರು. ಅವರು ನಿರ್ಮಿಸಿದ್ದ ಅಡ್ಡದಾರಿಯನ್ನು ಮಾರ್ಚ್ 18 ರಂದು ತೆಗೆದುಹಾಕಿದ್ದು, ಚರಂಡಿಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

 

ಈ ಹಿಂದೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಈ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಭೇಟಿ ನೀಡಿ ಪರಿಶೀಲಿಸಿದ್ದರು. ತಾಂತ್ರಿಕ ತಂಡವು ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ. ಇದು ಮತ್ತೊಮ್ಮೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: 8 ಸಾವಿರ ಕೋಟಿ ಖರ್ಚು ಮಾಡಿ ದಶಪಥ ರಸ್ತೆ ಮಾಡಿದ್ದೇವೆ, ಎಲ್ಲರೂ ಹೆಮ್ಮೆಪಡಬೇಕು – ಸಿಎಂ

 

 

ರಸ್ತೆ ನಿರ್ಮಾಣವಾದ ಬಳಿಕ ಬೆಂಗಳೂರು ಹೊರವಲಯದಲ್ಲಿ ಸಾಧಾರಣ ಬೇಸಿಗೆ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರದ ರಸ್ತೆ ಜಲಾವೃತವಾಗಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿ, ರಸ್ತೆ ಅಪಘಾತಗಳೂ ಸಂಭವಿಸಿವೆ. ಇದನ್ನೂ ಓದಿ: ಅಪ್ಪನೊಂದಿಗೆ ಸೇರಿ ಹೆಂಡ್ತಿ ಮೇಲೆ ಅತ್ಯಾಚಾರ – ತಂದೆಗೆ 14, ಮಗನಿಗೆ 10 ವರ್ಷ ಜೈಲು 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ 8 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದಶಪಥ ರಸ್ತೆಯನ್ನು ಉದ್ಘಾಟಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *