ಬೆಂಗಳೂರು: ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದಂತೆ ರಾಜಕಾರಣಿಗಳ ಆಸ್ತಿಯ ಮೌಲ್ಯಗಳ ಕುರಿತು ಲೆಕ್ಕಾಚಾರಗಳು ಆರಂಭವಾಗಿದೆ. ಇದುವರೆಗೂ ಅಭ್ಯರ್ಥಿಗಳು ಘೋಷಣೆ ಮಾಡಿಕೊಂಡಿರುವ ಆಸ್ತಿಯ ವಿವರಗಳಲ್ಲಿ ಕೆಲವು ಅಚ್ಚರಿ ಅಂಶಗಳು ಬೆಳಕಿಗೆ ಬರುತ್ತಿವೆ.
ರಾಜ್ಯದ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಹೊಸಪೇಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿಯ ವಿವರಗಳು ಇಂತಿದೆ.
Advertisement
Advertisement
ಶಾಸಕರ ಹೆಸರಿನಲ್ಲಿ ಚರಾಸ್ತಿ 314 ಕೋಟಿ 75 ಲಕ್ಷದ 54 ಸಾವಿರದ 785 ರೂ., ಸ್ಥಿರಾಸ್ತಿ 394 ಕೋಟಿ 63 ಲಕ್ಷ 53 ಸಾವಿರದ 309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27 ಕೋಟಿ 70 ಲಕ್ಷದ 31 ಸಾವಿರದ 565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಶಾಸಕರಾದ ಎಂಟಿಬಿ ನಾಗರಾಜ್ ಅವರು 8 ನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬಳಿಯಿದೆ 7.23 ಕೋಟಿ ರೂ. ಮೌಲ್ಯದ ಆಸ್ತಿ!
Advertisement
ಶಾಸಕರ ಪತ್ನಿ ಶಾಂತಕುಮಾರಿ ಅವರು ಹೆಸರಿನಲ್ಲಿ 122 ಕೋಟಿ 40 ಲಕ್ಷದ 9 ಸಾವಿರದ 258 ರೂ. ಚರಾಸ್ತಿ, 184 ಕೋಟಿ 1 ಲಕ್ಷದ 12 ಸಾವಿರ ರೂ. ಸ್ಥಿರಾಸ್ತಿ ಹಾಗೂ ಅವರ ವಾರ್ಷಿಕ ಆದಾಯ 52 ಕೋಟಿ ರೂ. ಸೇರಿದಂತೆ 25 ಲಕ್ಷ ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರೆ. ಇದನ್ನೂ ಓದಿ: 2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!
Advertisement
2013 ರ ಚುನಾವಣೆ ವೇಳೆ 470 ಕೋಟಿ 13 ಲಕ್ಷದ 52 ಸಾವಿರದ 248 ರೂ. ಆಸ್ತಿಯನ್ನು ಎಂಟಿಬಿ ನಾಗರಾಜ್ ಘೋಷಿಸಿಕೊಂಡಿದ್ದರು. ಇದನ್ನೂ ಓದಿ: 3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ