ಬೆಂಗಳೂರು: ತಾಯಿಯ ಕತ್ತನ್ನು ನಾನೇ ಸೀಳಿದೆ. ಬಾಯಿಗೆ ಬಟ್ಟೆ ತುರುಕಿದೆ ಬಳಿಕ ಗಂಟಲಿಗೆ ಚಾಕು ಚುಚ್ಚಿದೆ. ಒಂದೇ ಒಂದು ಬಾರಿ ಚಾಕು ಚುಚ್ಚಿದ ಕೂಡಲೇ ಆಕೆಯ ಪ್ರಾಣ ಹೋಗಿತ್ತು. ಆದರೂ ಪ್ರಾಣ ಹೋಗಿರುವುದನ್ನು ಕನ್ಫರ್ಮ್ ಮಾಡಿಕೊಳ್ಳೋದಕ್ಕೆ ಐದು ಬಾರಿ ಇರಿದು ಕೊಂದೆ ಎಂದು ಅಮೃತಾ ಪೊಲೀಸರ ಮುಂದೆ ಕೊಲೆ ಮಾಡಿದ ಧಾರುಣ ಘಟನೆಯನ್ನು ಇಂಚಿಂಚು ಬಾಯಿ ಬಿಟ್ಟಿದ್ದಾಳೆ.
ಅವತ್ತು ತಾಯಿಯನ್ನು ಕೊಲ್ಲಲೇ ಬೇಕು ಅಂದುಕೊಂಡಿದ್ದ ಅಮೃತಾ ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ. ಬೆಳಗಿನ ಜಾವ ಕೊಲೆ ಮಾಡುವುದಕ್ಕೆ ತೀರ್ಮಾನ ಮಾಡಿದ್ದಳು. ಅಂದುಕೊಂಡಂತೆ ತಾಯಿಯನ್ನು ಕೊಂದು ಮುಗಿಸಿದ್ದಳು. ಆದರೆ ಬೆನ್ನಿಗೆ ಬಿದ್ದ ಸಹೋದರನನ್ನು ಕೊಲೆ ಮಾಡುವುದಕ್ಕೆ ಆಗಿರಲಿಲ್ಲ. ಆತನನ್ನು ಕೊಲೆ ಮಾಡುವುದಕ್ಕೆ ಹೋದಾಗ ತಮ್ಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ, ಆದ್ದರಿಂದ ಅವನ ಕೊಲೆ ಮಾಡುವುದಕ್ಕೆ ಆಗಲಿಲ್ಲ ಅಮೃತಾ ಹೇಳಿದ್ದಾಳೆ.
Advertisement
Advertisement
ತಾಯಿಯನ್ನು ಕೊಂದ ವಿಚಾರ ಪ್ರಿಯಕರನಿಗೆ ಗೊತ್ತೆ ಇಲ್ಲ:
ಇಷ್ಟು ದಿನ ಅಮೃತಾ ತಾಯಿಯನ್ನು ಕೊಲೆ ಮಾಡುವುದಕ್ಕೆ ಪ್ರಿಯಕರನ ಕುಮ್ಮಕ್ಕು ಇತ್ತು. ಆತನ ಕುಮ್ಮಕ್ಕಿನಿಂದಲೇ ಅಮೃತಾ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಅಂದುಕೊಂಡಿದ್ದರು. ಅದರಂತೆ ಆತನನ್ನು ಬಂಧಿಸಿ ಕರೆದುಕೊಂಡು ಬಂದಿದ್ದರು. ಆದರೆ ಆತನಿಗೆ ಪ್ರಿಯತಮೆ ತನ್ನ ತಾಯಿಯನ್ನು ಕೊಂದಿದ್ದೇ ಗೊತ್ತಿರಲಿಲ್ಲ. ಆತನಿಗೆ ಅಮೃತಾ ತಾಯಿ ಸತ್ತಿತ್ತು ಅಂಡಮಾನ್‍ನಲ್ಲಿ ಗೊತ್ತಾಗಿದೆ.
Advertisement
ಅಂಡಮಾನ್‍ಗೆ ಖುಷಿ ಖುಷಿಯಿಂದ ಪ್ರಿಯಕರನೊಂದಿಗೆ ಹಾರಿದ್ದ ಪ್ರಿಯತಮೆ ಅಂಡಮಾನ್‍ಗೆ ಹೋಗುವ ತನಕ ತನ್ನ ತಾಯಿಯನ್ನು ಕೊಲೆ ಮಾಡಿ ಬಂದಿದ್ದೇನೆ ಎಂದು ಆತನಿಗೆ ಹೇಳಿರಲಿಲ್ಲ. ಅಂಡಮಾನ್‍ಗೆ ತಲುಪಿ ರಾತ್ರಿ ಕಳೆದ ಬಳಿಕ ನಾನು ನನ್ನ ತಾಯಿಯನ್ನು ಕೊಂದಿದ್ದೇನೆ. ಇನ್ನೇನು ನನ್ನನ್ನು ಪೊಲೀಸರು ಅರೆಸ್ಟ್ ಮಾಡಬಹುದು ಎಂದು ಕಣ್ಣೀರಿಟ್ಟಿದ್ದಾಳೆ.
Advertisement
ಪ್ರಿಯತಮೆ ಕಣ್ಣೀರು ಹಾಕುವುದನ್ನು ನೋಡುವುದಕ್ಕೆ ಆಗದ ಶ್ರೀಧರ್ ಅಮೃತಾಳಿಗೆ ಸಮಾಧಾನ ಮಾಡಿ ಟ್ರಿಫ್ ಮುಂದುವರಿಸಿದ್ದಾರೆ. ವಿಚಾರ ಗೊತ್ತಾದರೂ ಪೊಲೀಸರಿಗೆ ವಿಚಾರ ತಿಳಿಸದೆ ಆರೋಪಿಯನ್ನು ರಕ್ಷಣೆ ಮಾಡಿದ್ದು ತಪ್ಪು ಅಂತ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ಶ್ರೀಧರ್‍ನ ಮೇಲೆ ಸಣ್ಣ ಪ್ರಕರಣ ದಾಖಲಾಗಿದ್ದು, ಕೆ.ಆರ್.ಪುರಂ ಪೊಲೀಸರು ಐನಾತಿ ಹೆಣ್ಣಿನ ವಿಚಾರಣೆ ಮುಂದುವರಿಸಿದ್ದಾರೆ.