ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‍ಸಿಎಲ್) ನಿರ್ಧರಿಸಿದೆ.
ಇಷ್ಟು ದಿನ ಬೆಳಗ್ಗೆ 6ಗಂಟೆಗೆ ಆರಂಭವಾಗುತ್ತಿದ್ದ ಮೆಟ್ರೋ ರೈಲು ಸಂಚಾರ ಸೇವೆಗಳು ಡಿಸೆಂಬರ್ 20ರಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ಲಭ್ಯವಿರುತ್ತದೆ ಎಂದು ಬಿಎಂಆರ್‍ಸಿಎಲ್ ಪ್ರಕಟಿಸಿದೆ. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ
Advertisement
Advertisement
ಕೋವಿಡ್‍ಗೂ ಮುನ್ನ ಇದ್ದ ವೇಳಾಪಟ್ಟಿಯಂತೆಯೇ ಮೆಟ್ರೋ ಸೇವೆಗಳು ಎಂದಿನಂತೆ ಡಿಸೆಂಬರ್ 20ರಿಂದ ಪ್ರಾರಂಭವಾಗಲಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ರೈಲು ಟರ್ಮಿನಲ್ ನಿಲ್ದಾಣಗಳಾದ ಕೆಂಗೇರಿ, ಸಿಲ್ಕ್ ಇನ್‍ಸ್ಟಿಟ್ಯೂಟ್, ನಾಗಸಂದ್ರ ಮತ್ತು ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 5 ಗಂಟೆಗೆ ಹೊರಡಲಿದೆ. ಈ ನಿಲ್ದಾಣಗಳಿಂದ ಕೊನೆಯದಾಗಿ ರಾತ್ರಿ 11 ಗಂಟೆಗೆ ರೈಲು ಸಂಚರಿಸಲಿದೆ ಮತ್ತು ಎಂದಿನಂತೆ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ ನಿಧನ
Advertisement
Press Release from Chief PRO, BMRL regarding extension of timings of Namma Metro Rail Services from 20122021. @cpronammametro @iyerbharathi @TOIBengaluru @Lolita_TNIE @ChristinMP_TOI @KARailway @WF_Watcher @Bangaloremetrof pic.twitter.com/JhRHK3FQfq
— Srivas Rajagopalan (@srivasrbmrccoi1) December 18, 2021
Advertisement
ನಗರದ ಮುಖ್ಯ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ರಾತ್ರಿ 11.30 ಕ್ಕೆ ಸಂಚಾರ ಮಾಡಲಿದೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.