ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಂಗಳೂರಿನ ಮುಹಮ್ಮದ್ ತಾಖಿರ್ ಮೊಹಮ್ಮದ್ (33) ಎಂದು ಗುರುತಿಸಲಾಗಿದೆ. ಈತನನ್ನು ಶನಿವಾರ ಬಂಧಿಸಲಾಯಿತು. ಸೆಕ್ಷನ್ 120ಬಿ, ಐಪಿಸಿ 125 ಮತ್ತು ಸೆಕ್ಷನ್ 17,18 ಹಾಗೂ ಯುಎ (ಪಿ) 18ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‍ಐಎಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Advertisement
Advertisement
ಮುಸ್ಲಿಂ ಸಮುದಾಯದ ಯುವಕರಲ್ಲಿ ಮೂಲಭೂತವಾದವನ್ನು ಪಸರಿಸಿ, ಅವರನ್ನು ಐಎಸ್ ಉಗ್ರ ಸಂಘಟನೆಗೆ ಸೇರಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಎಂಬ ಆರೋಪದ ಮೇಲೆ ಮುಹಮ್ಮದ್‍ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ
Advertisement
ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ಮುಹಮ್ಮೊದ್ ಜೊತೆಗೆ ಜುಹಾಬ್ ಹಮೀದ್ ಅಲಿಯಾಸ್ ಶಕೀಲ್ ಮನ್ನಾ, ಇರ್ಫಾನ್ ನಾಸಿರ್, ಮೊಹದ್ ಶಿಹಾಬ್ ಎಂಬವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
Advertisement
ಎನ್‍ಐಎ ಈ ಹಿಂದೆ ಅಹಮ್ಮದ್ ಅಬ್ದುಲ್ ಕ್ಯಾಡರ್ ಮತ್ತು ಇರ್ಫಾನ್ ನಾಸಿರ್ ಅವರನ್ನು ಬಂಧಿಸಿ ಏ.1ರಂದು ಚಾರ್ಜ್‍ಶೀಟ್ ಸಲ್ಲಿಸಿತ್ತು.