ಬೆಂಗಳೂರು: ಚಂದ್ರ ಗ್ರಹಣದ ದಿನ ರಾಶಿ ಫಲಾಫಲ ಹೇಗಿದೆ ಅಂದರೆ ಎಚ್ಚರಿಕೆ ಕ್ರಮ ಅನುಸರಿಸದಿದ್ದರೆ ಅಪಾಯ ತಂದೊಡ್ಡಲಿದೆ.
ವರ್ಷದ ಮೊದಲ ಚಂದ್ರಗ್ರಹಣ ಭಯ ಹುಟ್ಟಿಸಿದೆ. ಸೂರ್ಯಗ್ರಹಣದ ಆದ ನಂತರ ಆದ ಅಗ್ನಿ ಅವಘಡ, ಪ್ರಾಕೃತಿಕ ವಿಕೋಪಗಳು ಮತ್ತೆ ಮರುಕಳಿಸುತ್ತಾ ಎಂಬ ಭಯ ಕಾಡುತ್ತಿದೆ. ಈ ಬಾರಿಯ ಚಂದ್ರಗ್ರಹಣ ಮನುಷ್ಯರ ರಾಶಿ ಫಲಾಫಲಗಳ ಮೇಲೆ ಗಾಢ ಪರಿಣಾಮ ಬೀರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾ ಇದ್ದಾರೆ.
Advertisement
ವರ್ಷ ಆರಂಭದ ಚಂದ್ರಗ್ರಹಣದಿಂದ ಎಫೆಕ್ಟ್ ಇದೆ ಎಂಬ ಮಾತು ಜ್ಯೋತಿಷಿ ವಲಯದಿಂದ ಕೇಳಿ ಬರ್ತಿದೆ. 22 ನಕ್ಷತ್ರ, 12 ರಾಶಿಯವರಿಗೂ ಚಂದ್ರ ಗ್ರಹಣದ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಚಂದ್ರನಿಗೇ ಗ್ರಹಣ ಆಗಬೇಕಾದರೆ ಇನ್ನೂ ಮನುಷ್ಯರಿಗೆ ಆಗಲ್ವ ಎಂಬ ಮಾತು ಜ್ಯೋತಿಷಿಗಳೇ ಹೇಳುತ್ತಿದ್ದಾರೆ. ರಾಶಿ ಫಲಾಫಲ ಯಾವ ರೀತಿ ಇದೆ. ಯಾವ ರಾಶಿಗೆ ಯಾವ ದೋಷ..? ಯಾವ ರೀತಿಯಲ್ಲಿ ಪರಿಹಾರ ಯಾವ ಮಾಡಬೇಕು? ಮತ್ತು 12 ರಾಶಿಯವರು ಗ್ರಹಣ ಸಮಯದಲ್ಲಿ ಯಾವ ರೀತಿ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದ್ದಾರೆ.
Advertisement
Advertisement
ಮೇಷ ರಾಶಿ ಮೇಲೆ ಗ್ರಹಣ ಎಫೆಕ್ಸ್ ಏನು..?
ಒಂದಿಷ್ಟು ಎಚ್ಚರಿಕೆಯಿಂದ ಇರಬೇಕು, ಆರೋಗ್ಯ ಸಮಸ್ಯೆ ಸಾಧ್ಯತೆ, ಕೌಟುಂಬಿಕ ಕಲಹ ಸಾಧ್ಯತೆ, ಹಣಕಾಸಿನ ಸಮಸ್ಯೆ, ಮಾನಸಿಕ ಒತ್ತಡ.
ಪರಿಹಾರ: ಸಮಾಧಾನ ಇರಬೇಕು, ಗೌರಿಶಂಕರನ ಪ್ರಾರ್ಥನೆ ಮಾಡಬೇಕು, ನೀವು ನಂಬಿರವ ದೈವದ ಅನುಗ್ರಹಕ್ಕಾಗಿ ಪೂಜೆ ಮಾಡಬೇಕು.
Advertisement
ವೃಷಭ ರಾಶಿ:
ಸೂರ್ಯ ಗ್ರಹಣದಿಂದ ಸಂಕಷ್ಟ ಎದುರಾಗಿದೆ. ಮಾನಸಿಕ ಒತ್ತಡ, ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ ಎದುರಾಗಲಿದೆ.
ಪರಿಹಾರ: ಮಹಾಲಕ್ಷ್ಮೀ ಪೂಜೆ, ಶಕ್ತಿ ದೇವತೆ ಪೂಜೆ ಮಾಡಬೇಕು.
ವಿಥುನ ರಾಶಿ:
ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಕಾಗದ ವ್ತವಹಾರಿಕ ಸಮಸ್ಯೆ, ಮಾನಸಿಕ ಒತ್ತಡ.
ಪರಿಹಾರ: ಮನೆ ದೇವರ ಪೂಜೆ ಮಾಡುವುದರಿಂದ ದೋಷ ಪರಿಹಾರವಾಗುವುದು.
ಕರ್ಕಟಕ ರಾಶಿ:
ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ವ್ಯಾಪಾರದಲ್ಲಿ ಅಡ್ಡಿಯಾಗುವುದು.
ಪರಿಹಾರ: ಗೌರಿಶಂಕರ, ಶಿವ, ಈಶ್ವರನ ಆರಾಧನೆ ಮಾಡಬೇಕು. ಹಾಗೆಯೇ ಓಂ ನಮಃ ಶಿವಾಯ ಅಂತ ಪ್ರಾರ್ಥನೆ ಮಾಡಿದರೆ ದೋಷ ಪರಿಹಾರವಾಗುವುದು. ಇದನ್ನೂ ಓದಿ: ಸೂರ್ಯಗ್ರಹಣ ಬೆನ್ನಲ್ಲೇ ಚಂದ್ರಗ್ರಹಣ – ನಾಳೆ ಗೋಚರವಾಗಲಿದೆ ತೋಳ ಚಂದ್ರಗ್ರಹಣ
ಸಿಂಹ ರಾಶಿ:
ವ್ಯಾಪಾರ ವ್ಯವಹಾರದಲ್ಲಿ ಅಡ್ಡಿ, ಅನಾರೋಗ್ಯ ಸಮಸ್ಯೆ ಉಂಟಾಗಲಿದೆ.
ಪರಿಹಾರ: ಶಿವನ ಆರಾಧನೆ, ಕಪ್ಪು ಬಣ್ಣದ ಆಕಳಿಗೆ ಪಾದ ಮುಟ್ಟಿ ನಮಸ್ಕಾರ ಮಾಡುವುದು.
ಕನ್ಯಾ ರಾಶಿ:
ವೈರತ್ವ ಮನೋಭಾವದ ಸಮಸ್ಯೆ, ಸತಿಪತಿ ಕಲಹ, ತಂದೆ ಮಕ್ಕಳ ನಡುವೆ ಸಮಸ್ಯೆ ಉಂಟಾಗುವುದು.
ಪರಿಹಾರ: ಶಿವನ ಆರಾಧನೆ ಹಾಗೂ ಮನೆ ದೇವರ ಪೂಜೆ ಮಾಡುವುದರಿಂದ ದೋಷ ಪರಿಹಾರವಾಗುವುದು.
ತುಲಾ ರಾಶಿ:
ಮನಸ್ಸಿನಲ್ಲಿ ದ್ವಂದ್ವ ಸಮಸ್ಯೆ, ಮಾನಸಿಕ ಒತ್ತಡ ಹಾಗೂ ಆರೋಗ್ಯದ ಸಮಸ್ಯೆ ಕಾಡುವುದು.
ಪರಿಹಾರ: ಶಿವನ ಆರಾಧನೆ ಹಾಗೂ ನಾರಾಯಣ ಮಂತ್ರ ಜಪಿಸಬೇಕು.
ವೃಶ್ಚಿಕ ರಾಶಿ:
ಮನೆ ಸಮಸ್ಯೆ, ಸತಿಪತಿ ಕಲಹ, ಬಂಧು ಮಿತ್ರರ ಕಲಹ ಉಂಟಾಗಲಿದೆ.
ಪರಿಹಾರ: ಮನೆ ದೇವರ ಪೂಜೆ ಮಾಡಬೇಕು.
ಧನುರ್ ರಾಶಿ:
ಸಮಸೆಗಳ ಮೇಲೆ ಸಮಸ್ಯೆ, ಮನೆ ಸಮಸ್ಯೆ, ತಂದೆ-ತಾಯಿ ಕಲಹ ಉಂಟಾಗುವುದು.
ಪರಿಹಾರ: ಮಹಾವಿಷ್ಣು ಪ್ರಾರ್ಥನೆ, ಮನೆ ದೇವರ ಪ್ರಾರ್ಥನೆ ಮಾಡಬೇಕು.
ಕುಂಭ ರಾಶಿ:
ದೂರ ಪ್ರಯಾಣದಲ್ಲಿ ಸಮಸ್ಯೆ, ಮಾನಸಿಕ ಒತ್ತಡ ಉಂಟಾಗುವುದು.
ಪರಿಹಾರ: ಲಕ್ಷ್ಮೀ ದೇವರ ಆರಾಧನೆ ಹಾಗೂ ಗೌರಿ ಪೂಜೆ ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.
ಮಕರ ರಾಶಿ:
ಆರೋಗ್ಯದ ಸಮಸ್ಯೆ, ಮಾನಸಿಕ ಒತ್ತಡ, ಒಮ್ಮತ ಅಬಿಪ್ರಾಯ ಇಲ್ಲದೇ ಇರೋದು, ಕೌಂಟುಂಬಿಕ ಕಲಹ.
ಪರಿಹಾರ: ಈಶ್ವರನ ಆರಾಧನೆ ಹಾಗೂ ಮಂತ್ರ ಪಟನೆ ಮಾಡಬೇಕು.
ಮೀನ ರಾಶಿ:
ಚಂಚಲ ಮನಸ್ಸು, ಮಾನಸಿಕ ಒತ್ತಡ, ಮನೆಯಲ್ಲಿ ಕಲಹ.
ಪರಿಹಾರ: ಮಹಾವಿಷ್ಣು ಪ್ರಾರ್ಥನೆ, ಗುರು ಹಿರಿಯರ ಸಲಹೆ ಹಾಗೂ ತುಳಸಿ ಅರ್ಚನೆ ಮಾಡಿಸಬೇಕು.
ಒಟ್ಟಾರೆ ಚಂದ್ರ ಗ್ರಹಣದಿಂದ ರಾಶಿ ಫಲಾನುಫಲಗಳ ಮೇಲೆ ಪ್ರಭಾವ ಬೀರಲಿದೆ. ಆಗಾಗಿ ಎಲ್ಲಾ ರಾಶಿಯವರು ದೇವರ ಪ್ರಾರ್ಥನೆ ಮಾಡಿ, ಹುರು ಹಿರಿಯರ ಸಲಹೆ ಪಡೆಯೋದು ಒಳ್ಳೆದು ಎಂಬುದು ಜ್ಯೋತಿಷಿಗಳ ಸಲಹೆ, ಒಟ್ಟಾರೆ ಚಂದ್ರ ಗ್ರಹಂಣ ಮಧ್ಯೆ ರಾತ್ರು ಇದ್ದರು ನಿರ್ಲಕ್ಷ್ಯ ಮಾಡದೇ ಎಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ.