– ಹನಿಟ್ರ್ಯಾಪ್ ಬೆನ್ನತ್ತಿದೆ ಸಿಸಿಬಿ
ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಬುಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬೆಳಕಿಗೆ ಬಂದಿದೆ.
ಇಷ್ಟು ದಿನ ಬ್ಯಾಟ್ಸ್ ಮನ್, ಬೌಲರ್ ಗಳು ಫಿಕ್ಸಿಂಗ್ ಆಗುತ್ತಾ ಇದ್ದರು. ಈ ಬ್ಯಾಟ್ಸ್ ಮನ್, ಬೌಲರ್ ಗಳನ್ನು ಫಿಕ್ಸ್ ಮಾಡೋದಕ್ಕೆ ರಾಣಿ ಜೇನು ಬರುತ್ತಿತ್ತು. ಫಿಕ್ಸಿಂಗ್ ಮಾಡೋದಕ್ಕೆ ಸುಂದರಿಯರ ಬಳಸಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಸುಂದರಿಯರ ಸೆರಗಿನಲ್ಲಿ ಇರುತ್ತಿದ್ದವರು, ಫಿಕ್ಸಿಂಗ್ ಮಾಡೋದಕ್ಕೆ ನಿಂತಿದ್ರು. ಇದು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಯಾ ಅವಾಂತರವಾಗಿದೆ. ಡ್ರಮರ್ ಜೊತೆ ಫಿಕ್ಸಿಂಗ್ ಮಾಡಿದ್ದವರು, ಬುಕ್ಕಿಗಳನ್ನೂ ಒನ್ ಟೂ ಒನ್ ಭೇಟಿಯಾಗಿದ್ರು. ಆದರೆ ಇದೀಗ ಕೆಪಿಎಲ್ ಅಲ್ಲಿ ಸುಂದರಿಯರ ಸಹವಾಸ ಮಾಡುತ್ತಿದ್ದಾರೆ.ಇದನ್ನೂ ಓದಿ: ಕೆಪಿಎಲ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಿಸಿಬಿ ಬಲೆಗೆ
Advertisement
ಕೆಪಿಎಲ್ ಫಿಕ್ಸ್ ಮಾಡೋದಕ್ಕೆ ಚಿಯರ್ ಗರ್ಲ್ಸ್ ಅನ್ನು ಬಳಸಿಕೊಳ್ತಾ ಇದ್ರಂತೆ. ಚಿಯರ್ ಗರ್ಲ್ಸ್ ಮೂಲಕ ಬ್ಯಾಟ್ಸ್ ಮನ್ ಮತ್ತು ಬೌಲರ್ ಫಿಕ್ಸ್ ಮಾಡುತ್ತಾ ಇದ್ದರು. ಒಟ್ಟಿನಲ್ಲಿ ಹನಿಟ್ರ್ಯಾಪ್ ಮಾಡೋ ಮೂಲಕ ಬುಕ್ಕಿಗಳು ಆಟಗಾರರನ್ನು ಸೆಳೆದ ಆರೋಪವೂ ಇದೆ. ಸದ್ಯಕ್ಕೆ ಆ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಿದ್ದಾರೆ.
Advertisement
ಕಳೆದ ಸೋಮವಾರ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಹರ್ಯಾಣ ಮೂಲದ ಪಿ ಸಯ್ಯಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ವೆಸ್ಟ್ ಇಂಡೀಸ್‍ನಲ್ಲಿ ಬಂಧನ ಮಾಡಿದ್ದರು.