– ಏ.12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ
ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga Mahotsav) ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್ 4 ರಿಂದ 14ರವರೆಗೆ ದ್ರೌಪತಮ್ಮ ಶಕ್ತ್ಯೋತ್ಸವ ಹನ್ನೊಂದು ದಿನಗಳ ಕಾಲ ನಡೆಯಲಿದೆ.
ಇನ್ನು ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ (A Jnanendra) ಕರಗವನ್ನು ಹೊರಲಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಬೆಂಗಳೂರು ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಹೊರುತ್ತಿದ್ದಾರೆ. ಈ ಬಾರಿ ಕರಗ ಹೊತ್ತರೇ 15ನೇ ಬಾರಿ ಕರಗ ಹೊತ್ತಂತೆ ಆಗುತ್ತದೆ. ಜ.27ರಂದು ರಾತ್ರಿ ನಡೆದ ಸಭೆಯಲ್ಲಿ ಜ್ಞಾನೇಂದ್ರ ಸ್ವಾಮಿಯನ್ನು ಮತ್ತೆ ಕರಗ ಹೊರಲು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಅಕ್ರಮ ಮತಾಂತರವು ಡಕಾಯಿತಿ, ಅತ್ಯಾಚಾರ, ಕೊಲೆಯಷ್ಟು ಗಂಭೀರ ಅಪರಾಧವಲ್ಲ: ಸುಪ್ರೀಂಕೋರ್ಟ್
ಸಭೆಯಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನವೀನ್, ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್, ಖಜಾಂಚಿ ಜಿ.ಬಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಮರನಾರಾಯಣ್ ಸಭೆ ನಡೆಸಿ ದಿನಾಂಕ ಹಾಗೂ ಕರಗ ಹೊರುವವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಸತತ 15ನೇ ಬಾರಿ ಕರಗ ಹೊರುತ್ತಿರುವ ಕರಗದ ಪೂಜಾರಿ ಎ. ಜ್ಞಾನೇಂದ್ರರಿಗೆ ಇದು ಕೊನೆಯ ಕರಗ ಶಕ್ತ್ಯೋತ್ಸವ ಆಗಿದೆ. ಇದನ್ನೂ ಓದಿ: Uttar Pradesh| ಧಾರ್ಮಿಕ ಉತ್ಸವದಲ್ಲಿ ವೇದಿಕೆ ಕುಸಿದು ಐವರು ಸಾವು – 40 ಮಂದಿಗೆ ಗಾಯ