ಬೆಂಗಳೂರು: ನಗರದಲ್ಲಿ ನಡೆದ ನ್ಯೂ ಇಯರ್ ಸೆಲೆಬ್ರೇಷನ್ (New Year Celebration) ದೊಡ್ಡ ದಾಖಲೆ ಎಂದೇ ಹೇಳಬಹುದು. ಯಾಕಂದ್ರೆ ಪೊಲೀಸರು (Police) ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬ್ರಿಗೇಡ್ ರೋಡ್ (Brigade Road), ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ (MG Road) ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
Advertisement
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಕೊರೊನಾ (Corona) ರೂಪಾಂತರಿ ಆತಂಕ ಇದ್ರೂ ನಿರ್ಬಂಧಗಳ ಜೊತೆ ಹೊಸ ವರ್ಷ ಸ್ವಾಗತಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ ಜನಸಾಗರ ಸೇರಿತ್ತು. ಒಂದು ಅಂದಾಜಿನ ಪ್ರಕಾರ ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ
Advertisement
Advertisement
ಕೊರೊನಾದಿಂದಾಗಿ ಕಳೆದೆರಡು ವರ್ಷಗಳಿಂದ ಡಲ್ ಹೊಡೆದಿದ್ದ ಹೊಸ ವರ್ಷಾಚರಣೆ ಈ ಬಾರಿ ಗ್ರ್ಯಾಂಡ್ ಆಗಿ ಜರುಗಿದೆ. ಜನ ಕಳೆದೆರಡು ವರ್ಷ ಜನ ವರ್ಷಾರಣೆಗೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಮನೆಯಿಂದ ಹೊರ ಬಂದಿರಲಿಲ್ಲ. ಈ ಬಾರಿ ಅವಕಾಶವಿದ್ದ ಕಾರಣ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಂತೂ ಜನಸಾಗರವೇ ಸೇರಿತ್ತು. ಹಾಡು, ಕುಣಿತ, ಡ್ಯಾನ್ಸ್, ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಬಾರ್, ಪಬ್, ಕ್ಲಬ್‍ಗಳಲ್ಲಿ ಸೇರಿದ್ದ ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿದರು. ಸಂಭ್ರಮಾಚರಣೆ ಬಳಿಕ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡಿದರು. ಇದನ್ನೂ ಓದಿ: ಹೊಸ ವರ್ಷ ಸಂಭ್ರಮ – ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಸಾವಿರಾರು ಪ್ರವಾಸಿಗರು
Advertisement
ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.