ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆಯ ಸೋಲಿನಿಂದ ಎಚ್ಚೆತ್ತ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗಿದ್ದಾರೆ.
ಜೆಡಿಎಲ್ ಪಿ ನಾಯಕ ಸ್ಥಾನವನ್ನ ತೊರೆದು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಹಿರಿಯ ಶಾಸಕ ಕೆ.ಟಿ.ರಾಮಸ್ವಾಮಿ ಅಥವಾ ಯಾರಾದರೂ ಹಿರಿಯ ಶಾಸಕರಿಗೆ ಜೆಡಿಎಲ್ ಪಿ ನಾಯಕನ ಸ್ಥಾನ ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿಗೆ ಮಾಜಿ ಸಿಎಂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಶೀಘ್ರವಾಗಿ ಜೆಡಿಎಲ್ ಪಿ ನಾಯಕನ ಸ್ಥಾನ ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗ್ತಾರೆ ಎನ್ನುವ ಮಾತು ಜೆಡಿಎಸ್ ಪಾಳಯದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಕುಮಾರಸ್ವಾಮಿ ಪಕ್ಷ ಸಂಘಟನೆಗಾಗಿ ಜೆಡಿಎಲ್ ಪಿ ನಾಯಕನ ಸ್ಥಾನ ತೊರೆದು ಪಕ್ಷ ಸಂಘಟನೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದ್ದು ಯಾವಾಗ ಮುಹೂರ್ತ ಕೂಡಿ ಬರಬಹುದು ಅನ್ನೋದೇ ಸದ್ಯದ ಕುತೂಹಲವಾಗಿದೆ.
Advertisement