ಬೆಂಗಳೂರು: ಭಾರತೀಯ ಸೇನೆ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿಗಳ ಕುರಿತು ಸಾಕ್ಷಿ ಸಮೇತ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ರೆ ಸೇನೆಯ ಈ ಕಾರ್ಯಾಚರಣೆಗೆ ನೆರವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಮ್ಮ ಇಸ್ರೋ (ISRO) ಸಂಸ್ಥೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹೌದು, ಭಾರತೀಯ ಸೇನೆಗೆ (Indian Army) ಉಗ್ರರ ನೆಲೆಗಳನ್ನ ತೋರಿಸಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಯುದ್ಧದ ಸಂದರ್ಭ ನಿರ್ಮಾಣ ಆಗ್ತಿದ್ದಂತೆ ಭಾರತೀಯ ಸೇನೆ ಇಸ್ರೋ ಸಂಸ್ಥೆಯ ಸಹಾಯ ಕೇಳಿತ್ತು. ಹೀಗಾಗಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ ಉಗ್ರರ ನೆಲೆ ಫೋಟೋಗಳನ್ನ ಕಳಿಸಿಕೊಟ್ಟಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡ್ರೋನ್ ಲಾಂಚ್ ಪ್ಯಾಡ್‌ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಕರ ಗುರಿಯಿಟ್ಟ ಭಾರತೀಯ ಸೇನೆ ಉಗ್ಗರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಿತ್ತು ಎಂದು ಇಸ್ರೋದ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್‌ನಲ್ಲಿರುವ ಉಗ್ರರ ನೆಲೆಗಳಿಗೆ ಹೊಡೀತೀವಿ: ಅಮೆರಿಕಗೆ ಮೊದಲೇ ಹೇಳಿದ್ದ ಜೈಶಂಕರ್
ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್ ಉಪಗ್ರಹ – ಡ್ರೋನ್ ಅಂತ ಬೆಚ್ಚಿದ ಜನ
ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ (ಬಾಂಬ್ ಹಾನಿ ಮೌಲ್ಯಮಾಪನ) ಚಿತ್ರವನ್ನು ಕಾವಾ ಸ್ಪೇಸ್ ಹಂಚಿಕೊಂಡಿದೆ. ಭಾರತೀಯ ಎಎಲ್‌ಸಿಎಂ (ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ) ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ (ಪಾಕಿಸ್ತಾನ ವಾಯುಪಡೆ) ಹ್ಯಾಂಗರ್ ಮೇಲೆ ಆಗಿರುವ ಎಫೆಕ್ಟ್ ಬಗ್ಗೆ ಸಾಕ್ಷಿ ಇದೆ. ಇದನ್ನೂ ಓದಿ: ಭಾರತೀಯ ಕ್ರೂಸ್ ಕ್ಷಿಪಣಿಗಳಿಂದ ಪಾಕ್ ವಾಯುನೆಲೆಗಳು ಧ್ವಂಸ – ಸೇನೆಯಿಂದ ಸಾಕ್ಷಿ ರಿಲೀಸ್
ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೊಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್‌ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ. ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್‌ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ.