– ಹಿಡನ್ ಕ್ಯಾಮೆರಾ ಇಟ್ಟು ಖೆಡ್ಡಾಕ್ಕೆ ಕೆಡವಿದ ಯುವತಿಯರು
ಬೆಂಗಳೂರು: ರಾಜಧಾನಿಯ ಹೊಯ್ಸಳ ನಗರದಲ್ಲಿ ತಡರಾತ್ರಿ ಯುವತಿಯರ ಒಳ ಉಡುಪುಗಳನ್ನು(Innerwear) ಕದ್ದು ವಿಕೃತಿ ಮೆರೆಯುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು (Indiranagar Police) ಬಂಧಿಸಿದ್ದಾರೆ
ಸದ್ದಾಂ ಹುಸೇನ್ ಬಂಧಿತ ಆರೋಪಿ. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದ್ದ ಈ ವಿಚಿತ್ರ ಕಳ್ಳತನದಿಂದ ಬೇಸತ್ತಿದ್ದ ಯುವತಿಯರು, ತಾವೇ ಸ್ವತಃ ಹಿಡನ್ ಕ್ಯಾಮೆರಾ(Hidden Camera) ಇಟ್ಟು ಈ ವಿಕೃತ ಕಾಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಯ್ಸಳ ನಗರದ ಮನೆಯೊಂದರ ಬಾಲ್ಕನಿ/ವರಾಂಡದಲ್ಲಿ ಒಣಹಾಕುತ್ತಿದ್ದ ಯುವತಿಯರ ಒಳ ಉಡುಪುಗಳು ಕಳೆದ ಆರು ತಿಂಗಳಿನಿಂದ ನಿಗೂಢವಾಗಿ ಮಾಯವಾಗುತ್ತಿದ್ದವು. ಇದಕ್ಕಿಂತಲೂ ವಿಚಿತ್ರವೆಂದರೆ ಕಳ್ಳತನ ಮಾಡಿದ ಮರುದಿನವೇ ಆತ ಹಳೆಯ ಬಟ್ಟೆಗಳನ್ನು ತಂದು ಅಲ್ಲೇ ಹಾಕಿ, ಮತ್ತೆ ಹೊಸ ಬಟ್ಟೆಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ.
ಇದರಿಂದ ಆತಂಕಗೊಂಡ ಯುವತಿಯರು ಈ ವಿಕೃತನನ್ನು ಹೇಗಾದರೂ ಮಾಡಿ ಪತ್ತೆಹಚ್ಚಲೇಬೇಕೆಂದು ಪಣತೊಟ್ಟು, ಜುಲೈ 1ರಂದು ಬಟ್ಟೆ ಒಣಹಾಕುವ ಜಾಗದಲ್ಲಿ ರಹಸ್ಯವಾಗಿ ಹಿಡನ್ ಕ್ಯಾಮೆರಾವನ್ನು ಅಳವಡಿಸಿದ್ದರು. ಇದನ್ನೂ ಓದಿ: 50 ಲಕ್ಷಕ್ಕಾಗಿ ಪತ್ನಿ, ಮಾವನ ಮೇಲೆ ಹಲ್ಲೆಗೆ ಯತ್ನ – PSIಗೆ ಪರಸ್ತ್ರೀ ವ್ಯಾಮೋಹ, ಕಾಮಪುರಾಣ ಬಯಲು
ಕ್ಯಾಮೆರಾದಲ್ಲಿದ್ದ ಭದ್ರತಾ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಯುವತಿಯರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸದ್ದಾಂ ಹುಸೇನ್‌ನನ್ನು ವಶಕ್ಕೆ ಪಡೆದು ಆತನ ಈ ವಿಕೃತ ಚಾಳಿಯ ಹಿಂದಿನ ಉದ್ದೇಶದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
