ಮೊದಲ ರಾತ್ರಿಯೇ ಹೆಂಡ್ತಿಗೆ ನೀಲಿ ಚಿತ್ರ ತೋರಿಸಿ ಸಹಕರಿಸುವಂತೆ ಕಿರುಕುಳ

Public TV
1 Min Read
basavagudi

– ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಗಂಡನ ವಿಕೃತ ವರ್ತನೆಗೆ ಬೇಸತ್ತ ಪತ್ನಿ ಠಾಣೆ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

2018 ರಲ್ಲಿ ಊರ್ವಶಿ (ಹೆಸರು ಬದಲಾಯಿಸಲಾಗಿದೆ) ಹಾಗೂ ಹರ್ಷವರ್ಧನ್‍ಗೆ ವಿವಾಹವಾಗಿತ್ತು. ಮದುವೆಯಾದ ಮೊದಲ ರಾತ್ರಿಯಲ್ಲೇ ವಿಕೃತಿ ಮೆರೆದಿದ್ದ ಗಂಡ, ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿದ್ದ. ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಕೂಡ ಮಾಡಿದ್ದಾನೆ.

marriage bride

ಮದುವೆ ವೇಳೆ ಊರ್ವಶಿ ಪೋಷಕರು ಲಕ್ಷಾಂತರ ರೂಪಾಯಿ ಒಡವೆ ನೀಡಿ ಮದುವೆ ಮಾಡಿದ್ದರು. ಮದುವೆ ಮುನ್ನ ಉತ್ತಮ ಕೆಲಸದಲ್ಲಿ ಇರುವುದಾಗಿ ಹೇಳಿದ್ದ ಹರ್ಷವರ್ಧನ್, ಮದುವೆಯಾದ ಮೇಲೆ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದ. ಮದುವೆ ಮುಗಿದು ಫಸ್ಟ್ ನೈಟ್ ವೇಳೆ ಅಶ್ಲೀಲ ವಿಡಿಯೋ ತೋರಿಸಿ ವಿಕೃತಿ ಮೆರೆದಿದ್ದ. ಜೊತೆಗೆ ಗಂಡನ ಚಿತ್ರಹಿಂಸೆಗೆ ನೊಂದು ಹೋಗಿರುವ ಹೆಂಡತಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ.

ಹಣ ತರಲಿಲ್ಲ ಅಂದರೆ ಕೊಲ್ಲುವುದಾಗಿ ಪತ್ನಿಗೆ ಬೆದರಿಕೆ ಕೂಡ ಹಾಕಿದ್ದ. ಇದರಿಂದ ನೊಂದ ಆಕೆ ತವರು ಮನೆಯಿಂದ 2 ಲಕ್ಷ ಹಣ ಕೊಟ್ಟಿದ್ದರು. ಇದು ಸಾಲದು ಎಂದು ಕೆಲಸದ ಹಣ ಕೂಡ ಹೆಂಡತಿಯಿಂದ ಕಿತ್ತುಕೊಳ್ಳುತ್ತಿದ್ದ. ಲೀಸ್‍ಗೆ ಕೊಟ್ಟಿದ್ದ 7.50 ಲಕ್ಷ ಹಣ ಕೂಡ ಮಾಲೀಕನಿಂದ ವಾಪಸ್ ಪಡೆದಿದ್ದ. ನೊಂದ ಗೃಹಿಣಿ ತಂದೆ-ತಾಯಿ ಲೀಸ್‍ಗೆ ಮನೆ ಹಾಕಿಸಿಕೊಟ್ಟಿದ್ದರು. ಆದರೆ ಹೆಂಡತಿ ಕೆಲಸಕ್ಕೆ ಹೋದಾಗ ಮುಂಗಡ ಹಣ ಪಡೆದ ಹರ್ಷವರ್ಧನ್ ಮನೆ ಖಾಲಿ ಮಾಡಿಕೊಂಡು ಹೋಗಿದ್ದ.

basavana gudi womens police station

ಗಂಡನ ವರದಕ್ಷಿಣೆ ಕಿರುಕುಳ ಹಾಗೂ ಮೃಗಿಯ ವರ್ತನೆ ಬಗ್ಗೆ ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಗಂಡ ಹಾಗೂ ಮಾವನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *