ಬೆಂಗಳೂರು: ಬಾಗಿಲು ತೆಗೆದಿದೆ ಅಂತ ಮನೆಗೆ ನುಗ್ಗಿದ ಕಳ್ಳನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಅಲ್ಲಿ ನಡೆದಿದೆ.
ಕಳ್ಳನನ್ನು ವೆಂಕಟಸ್ವಾಮಿ ಎಮದು ಗುರುತಿಸಲಾಗಿದೆ. ಕಳೆದ ಡಿಸೆಂಬರ್ 5 ರಂದು ವೈಟ್ ಫೀಲ್ಡ್ ನ ಬಾಲಾಜಿ ಸರೋವರ ಅಪಾರ್ಟ್ ಮೆಂಟ್ ಗೆ ನುಗ್ಗಿದ್ದ ಕಳ್ಳ, ಮಹಿಳೆ ಡೋರ್ ಲಾಕ್ ಮಾಡದೇ ಇರೋದನ್ನ ಗಮನಿಸಿ ಒಳನುಗ್ಗಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲ ಅಂತ ರೂಂ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಈ ವೇಳೆ ಮಹಿಳೆ ಮನೆಯ ಕಿಚನ್ ನಲ್ಲಿದ್ದರೆ, ಮತ್ತೊಂದು ರೂಂನಲ್ಲಿ ಮಹಿಳೆಯ ಮಗ ಮಲಗಿದ್ದನು. ಇತ್ತ ಕಳ್ಳ ಮನೆಯಲ್ಲಿ ಯಾರೂ ಇಲ್ಲ ಅಂತ ಕಬೋರ್ಡ್ ನಲ್ಲಿ ಕೈ ಚಳಕ ತೋರಲು ಮುಂದಾಗಿದ್ದಾನೆ. ಮನೆಯಲ್ಲಿ ಆಗಿದ್ದ ಶಬ್ದ ಕೇಳಿ ರೂಂ ಬಳಿ ಬಂದ ಮಹಿಳೆ ಕಳ್ಳನನ್ನು ನೋಡಿ ಚೀರಿಕೊಂಡಿದ್ದಾಳೆ.
ಮಹಿಳೆಯನ್ನು ನೋಡಿ ಓಡಿದ ಕಳ್ಳ ಅಪಾರ್ಟ್ ಮೆಂಟ್ ಫಸ್ಟ್ ಪ್ಲೋರ್ ನ ಚಪ್ಪಲಿ ಸ್ಟಾಂಡ್ ಹಿಂದೆ ಅವಿತಿದ್ದನು. ಇದನ್ನರಿತ ಸ್ಥಳೀಯರು ಕಳ್ಳನನ್ನು ಹಿಡಿದು ಥಳಿಸಿದ್ದಾರೆ.
ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.