Connect with us

Bengaluru City

ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ

Published

on

ಬೆಂಗಳೂರು: ಹೆಬ್ಬಾಳ ಶಾಸಕ ಭೈರತಿ ಬಸವರಾಜ್ ಅವರ ಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.

ಭೈರತಿ ಗ್ರಾಮದಲ್ಲೇ ಶಾಸಕರ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಶಾಸಕರ ಪರಿಚಯಸ್ಥ 35 ವರ್ಷದ ಶಿವಕುಮಾರ್ ಎಂಬಾತ ಈ ಕೃತ್ಯ ಎಸಗಲು ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಗಳ ಸಹಾಯದಿಂದ ಭೈರತಿ ಸುರೇಶ್ ಪಾರಾಗಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭೈರತಿಸುರೇಶ್, ಶಿವು ಮೊದಲು ನನ್ನ ಕಾರಿಗೆ ಗುದ್ದಿ ಮುಂದಕ್ಕೆ ಹೋದನು. ಮತ್ತೆ ವಾಪಸ್ ಬಂದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಸಹಾಯದಿಂದ ಪಾರಾಗಿದ್ದೇನೆ ಎಂದರು.

ಶಿವು ತಾಯಿ ನಮ್ಮ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವನ ಮನೆಯವರೆಲ್ಲರೂ ಒಳ್ಳೆಯವರು. ಈತ ಮಾತ್ರ ಸ್ವಲ್ಪ ಪೋಲಿಯಾಗಿದ್ದನು. ಶಿವು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಯಾಕೆ ಹೀಗೆ ಮಾಡಿದನೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

ಶಿವು ಕಳೆದ 2-3 ದಿನಗಳಿಂದ ಮನೆ ಹೊರಗಡೆ ಓಡಾಡುತ್ತಿದ್ದನು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆತನನ್ನು ಚಿಕ್ಕ ವಯಸ್ಸಿನಿಂದಲೇ ನೋಡುತ್ತಿದ್ದೇನೆ. ನಮ್ಮ ಮುಂದೆಯೇ ಆಡಿ ಬೆಳೆದ ಹುಡುಗ ಆತನಾಗಿದ್ದು, ನಮ್ಮೊಂದಿಗೆ ಚೆನ್ನಾಗಿಯೇ ಇದ್ದನು. ಶಿವು ಅವರಿಗೆ ಮನೆ ಕೂಡ ಕಟ್ಟಿಸಿ ಕೊಡಲಾಗಿತ್ತು. ಆದರೆ ಕೊಲೆ ಮಾಡಲು ಯಾಕೆ ಯತ್ನಿಸಿದ ಎಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೃಹ ಮಂತ್ರಿಗಳು ಕೂಡ ಕರೆ ಮಾಡಿ ನನ್ನೊಂದಿಗೆ ಮಾತುಕತೆ ನಡೆಸಿದರು. ತನಿಖೆಯ ಬಳಿಕವಷ್ಟೇ ಆತ ಯಾಕೆ ಹೀಗೆ ಮಾಡಿದನೆಂದು ತಿಳಿದು ಬರಬೇಕಿದೆ ಎಂದು ಭೈರತಿ ತಿಳಿಸಿದರು.

Click to comment

Leave a Reply

Your email address will not be published. Required fields are marked *