ಬೆಂಗಳೂರು: ಶನಿವಾರದ ಬಿರುಮಳೆಯ ಹೊಡೆತಕ್ಕೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ. ಕುರುಬರಹಳ್ಳಿಯ ಜೆಸಿ ನಗರದಲ್ಲಿ ಮಳೆರಾಯ ಭಾರೀ ದುರಂತಕ್ಕೆ ಕಾರಣವಾಗಿದ್ದು, ವ್ಯಕ್ತಿಯೊಬ್ಬರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ.
ಕಳೆದ 15 ದಿನಗಳಿಂದ ಜೆಸಿ ನಗರದ ಬಳಿ ಹಾದು ಹೋಗಿರುವ ರಾಜಾಕಾಲುವೆಗೆ ತಡೆಗೋಡೆ ನಿರ್ಮಿಸಲಾಗ್ತಿತ್ತು. ನಿನ್ನೆ ರಾತ್ರಿ 8.50ರ ಸುಮಾರಿಗೆ ಜೆಸಿಬಿಯ ಕ್ಲೀನರ್ ಹಾಗೂ ಗುತ್ತಿಗೆದಾರ ಬಸವರಾಜನ ಬಾಮೈದ 24 ವರ್ಷ ರಾಜಕುಮಾರ್ ರಾಜಕಾಲುವೆ ಬಳಿಯೇ ಮಾತಾನಾಡುತ್ತಾ ಕುಳಿತಿದ್ದರು.
Advertisement
ಈ ವೇಳೆ, ಭಾರಿ ಮಳೆ ಸುರಿದು ಕ್ಷಣಾರ್ಧದಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ. ಈ ಸಂದರ್ಭದಲ್ಲಿ ರಾಜಕುಮಾರ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಆದ್ರೆ ಜೊತೆಗಿದ್ದ ಕ್ಲೀನರ್ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ರಾಜ್‍ಕುಮಾರ್ ಶೋಧ ಕಾರ್ಯಕ್ಕೆ ರಾತ್ರಿಯಿಡಿ ಮಳೆ ಅಡಿಯಾಗಿತ್ತು. ಆದ್ರೂ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಸಿಬ್ಬಂದಿ ಒಂದಿಷ್ಟು ಸಮಯ ಶೋಧಕಾರ್ಯ ನಡೆಸಿತು. ಭಾನುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಶುರುವಾಗಲಿದೆ. ರಾತ್ರಿ ಮೇಯರ್ ಹಾಗೂ ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ರು.